ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತುಂಗಾ ನದಿಯ ತೀರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಅತ್ಯಂತ ವೈಭವದಿಂದ ತೆಪ್ಪೋತ್ಸವ ಜರುಗಿತು. ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದರು.
ಶಿವಕಾಶಿಯ ಪ್ರಸಿದ್ಧ ಪಟಾಕಿ ತಜ್ಞರು ಸಿಡಿಮದ್ದು ಪ್ರದರ್ಶನವನ್ನು ನಡೆಸಿಕೊಟ್ಟರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಪಟಾಕಿ ಪ್ರದರ್ಶನವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
READ | ಅತ್ತೆಯಂದಿರನ್ನೇ ಮನೆಯಿಂದ ಹೊರಹಾಕಿದ ಸೊಸೆ, ಕಾನೂನು ಸೇವಾ ಸಮಿತಿ ಪ್ರಮುಖ ತೀರ್ಪು
ಜಾತ್ರೆಯ ವಿಶೇಷಗಳೇನು?
- ತುಂಗಾನದಿಯ ತೀರದಲ್ಲಿ ವಿದ್ಯುತ್ ದೀಪಾಲಂಕಾರ ವಿಶೇಷವಾಗಿತ್ತು. ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯನ್ನು ಸಿದ್ಧಪಡಿಸಲಾಗಿತ್ತು.
- ತುಂಗಾ ನದಿಯ ಕಮಾನು ಸೇತುವೆಯನ್ನು ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು.
- ಸಿಡಿಮದ್ದು ಜಾತ್ರೆಯ ಆಕರ್ಷಣೆಯಾಗಿದ್ದು, ಈ ಸಲವೂ ಬಾನಂಗಳದಲ್ಲಿ ಬಣ್ಣಬಣ್ಣದ ಸಿಡಿಮದ್ದು ಚಿತ್ತಾರ ಮೂಡಿಸಿತ್ತು.
- ಶ್ರೀರಾಮೇಶ್ವರ ದೇವರ ಉತ್ಸವ ಮೂರ್ತಿ ಹೊತ್ತು ತುಂಗಾ ನದಿಯಲ್ಲಿ ತೇಲಿದ ತೆಪ್ಪ. ಭಕ್ತಿಯಿಂದ ಕೈಮುಗಿದ ಭಕ್ತಾದಿಗಳು.
ಜಾತ್ರಾ ಮಹೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷೆ ಗೀತಾ, ತೆಪ್ಪೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಸೇರಿ ಹಲವರಿದ್ದರು.