Court news | ಅತ್ತೆಯಂದಿರನ್ನೇ ಮನೆಯಿಂದ ಹೊರಹಾಕಿದ ಸೊಸೆ, ಕಾನೂನು ಸೇವಾ ಸಮಿತಿ ಪ್ರಮುಖ ತೀರ್ಪು

Aged court news

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಅತ್ತೆಯಂದಿರನ್ನು ಮನೆಯಿಂದ ಹೊರಾಹಾಕಿದ ಪ್ರಕರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯು ಪ್ರಮುಖ ತೀರ್ಪು ನೀಡಿದೆ.
ಭದ್ರಾವತಿ ತಾಲೂಕಿನ ಹೊಸೂರು ಕಂಬದಾಳು ಗ್ರಾಮದ ಸೈಯ್ಯದ್ ಸಾಬ್ ಅವರು ಸಹೋದರಿಯರಾದ ಸಗೀರುನ್ನೀಸ(80) ಮತ್ತು ಹಸೀನಾ ಬಾನು(75) ಎಂಬುವವರನ್ನು ಮದುವೆಯಾಗಿದ್ದರು. ತಮ್ಮ ಹೆಸರಿನಲ್ಲಿದ್ದ ಮನೆಯನ್ನು ಇಬ್ಬರೂ ಪತ್ನಿಯರ ಹೆಸರಿಗೆ ದಾಖಲಿಸಿದ್ದರು. ನಂತರ ಕರೋನಾದಿಂದ ಸೈಯದ್ ಸಾಬ್ ಮೃತಪಟ್ಟಿದ್ದರು. ಮಾವ ಮೃತಪಟ್ಟಿದ್ದರಿಂದ ಸೊಸೆಯು ಇಬ್ಬರೂ ಅತ್ತೆಯರನ್ನು ಮನೆಯಿಂದ ಹೊರಹಾಕಿದ್ದರು.

READ | ಪಿಪಿ ಮಾರಲು ಬಂದ ಬಾಲಕ ಶವವಾದ | ಶುಂಠಿ ಕಣದಲ್ಲಿ ನೀರು ಹರಿಸಲು ಹೋದವನಿಗೆ ಗುಂಡೇಟು

ಮಗ, ಸೊಸೆ ವಿರುದ್ಧ ಪ್ರಕರಣ
ಮನೆಯಿಂದ ಹೊರಹಾಕಿದ್ದರಿಂದ ಅತ್ತೆಯಂದಿರು ಹಿರಿಯ ನಾಗರಿಕರ ಪಾಲನೆ ಪೋಷಣೆ ಕಾಯ್ದೆ ಅಡಿ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮಗ ಮತ್ತು ಸೊಸೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸೊಸೆಯ ವಾಸಕ್ಕೆ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಿ, ಇಬ್ಬರೂ ವಯೋವೃದ್ಧರಿಗೆ ಮನೆ ಬಿಟ್ಟುಕೊಡುವಂತೆ ಆದೇಶಿಸಿತ್ತು. ಮನೆ ಖಾಲಿ ಮಾಡದೇ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ಈ ಹಿಂದಿನ ಆದೇಶವನ್ನೇ ಎತ್ತಿಹಿಡಿಯಲಾಗಿತ್ತು. ಇಷ್ಟಾದರೂ ಮನೆ ಖಾಲಿ ಮಾಡದೇ ಪೋಷಣೆಯೂ ಮಾಡಿರಲಿಲ್ಲ. ಹೀಗಾಗಿ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಪ್ರಧಾನ ಸಿವಿಲ್ ನ್ಯಾಯಾಲಯ ನ್ಯಾಧೀಶ ಟಿ.ಶ್ರೀಕಾಂತ್, ತಾಲೂಕು ದಂಡಾಧಿಕಾರಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಿಡಿಓಗೆ ನೋಟಿಸ್ ಜಾರಿ ಮಾಡಿ ಉಪ ವಿಭಾಗಾಧಿಕಾರಿ, ಡಿಸಿ ಅವರ ಆದೇಶ ಅನುಷ್ಠಾನಗೊಳಿಸುವಂತೆ ಆದೇಶಿಸಿದ್ದರು. ನಂತರ, ಕಂಬದಾಳು ಹೊಸೂರು ಮನೆಯಿಂದ ಸೊಸೆಯನ್ನು ತೆರವುಗೊಳಿಸಿ, ಅತ್ತೆಯಂದಿರಿಗೆ ಮನೆ ಹಸ್ತಾಂತರಿಸಲಾಯಿತು.

error: Content is protected !!