Blast | ಶಿರಾಳಕೊಪ್ಪದಲ್ಲಿ ಸ್ಫೋಟ ಪ್ರಕರಣ, ಎಸ್.ಪಿ ಹೇಳಿದ್ದೇನು? ಇದುವರೆಗಿನ ಬೆಳವಣಿಗೆಗಳ‌ ಮಾಹಿತಿ ಇಲ್ಲಿದೆ

Breaking news1

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪ ಭಾನುವಾರ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಫೋಟದ ಬಗ್ಗೆ ಎಸ್.ಪಿ ಹೇಳಿದ್ದೇನು?
ವಾಟ್ಸಾಪ್ ಸಂದೇಶದ ಮೂಲಕ ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. “ಉಮೇಶ್ ಮತ್ತು ರೂಪಾ ದಂಪತಿ ಶಿರಾಳಕೊಪ್ಪ ಸಂತೆಯಲ್ಲಿಂದು ಬೆಡ್ ಶೀಟ್ ಖರೀದಿಸಿದ್ದರು. ಅದೇ ಸಂತೆಯಲ್ಲಿದ್ದ ಅಂಗಡಿಯ ಮಾಲೀಕನೊಬ್ಬ ಪರಿಚಯ ಇದ್ದುದ್ದರಿಂದ ಬ್ಯಾಗ್ ಅನ್ನು ಅಂಗಡಿಯಲ್ಲಿಟ್ಟು ಸಂತೆಗೆ‌ ಹೋಗಿದ್ದರು. ಆ ವೇಳೆ ಬ್ಯಾಗ್ ನಲ್ಲಿದ್ದ ವಸ್ತು ಸ್ಫೋಟಗೊಂಡಿದೆ” ಎಂದು ತಿಳಿಸಿದ್ದಾರೆ.
“ಬ್ಯಾಗಿನಲ್ಲಿ ಕಾಡು ಹಂದಿಗೆ ಇಡಲು ತಂದಿದ್ದ ಸಿರಿಮದ್ದಿತ್ತು. ಅದು ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ” ಎಂದು ವಿವರಿಸಿದ್ದಾರೆ.
“ಆರೋಪಿಗಳ‌ ಪತ್ತೆಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಎಸ್.ಪಿ ಮಿಥುನ್ ಕುಮಾರ್ ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುವ ಕೆಲಸ‌ನ ಡೆದಿದೆ.

error: Content is protected !!