ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕನೊಬ್ಬ ಮೃತಪಟ್ಟಿದ್ದಾನೆ.
READ | ಗಲಾಟೆ ವೇಳೆ ಪಿಸ್ತೂಲ್ ತೋರಿಸಿದ ಇಬ್ಬರು ಅರೆಸ್ಟ್
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲೆ ಗ್ರಾಮದ ಪುನೀತ್ ಆಚಾರ್ (19) ಎಂಬಾತ ಮೃತಪಟ್ಟಿದ್ದಾನೆ. ಐಟಿಐ ಅಭ್ಯಾಸ ಮಾಡುತ್ತಿದ್ದ ಈತ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಹೋರಿ ಹಬ್ಬ ವೀಕ್ಷಿಸುವುದಕ್ಕಾಗಿ ಬಂದಾಗ ಹೋರಿ ತಿವಿದಿದ್ದು, ತೀವ್ರ ಗಾಯಗೊಂಡ ಪುನೀತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಆತ ಮೃತಪಟ್ಟಿದ್ದಾನೆಂದು ಮಾಹಿತಿ ಲಭ್ಯವಾಗಿದೆ. ಮೃತನ ತಂದೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.