Arrest | ಗಲಾಟೆ ವೇಳೆ ಪಿಸ್ತೂಲ್‌ ತೋರಿಸಿದ ಇಬ್ಬರು ಅರೆಸ್ಟ್

Gun

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಸಾಗರ ಪಟ್ಟಣದ ಜಿ.ಪಿ ರಸ್ತೆಯಲ್ಲಿ ನಡೆದ ಗಲಾಟೆ ವೇಳೆ ಪಿಸ್ತೂಲ್ ತೋರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

READ | ರಾತ್ರಿ ಉಂಡು ಮಲಗಿದ ಶಿಕ್ಷಕನಿಗೆ ಬೆಳಗ್ಗೆದ್ದು ನೋಡಿದಾಗ ಶಾಕ್

ಆಯನೂರಿನ ದರ್ಶನ್(19), ಸಾಗರದ ನವೀನ್(25) ಎಂಬುವವರನ್ನು ಬಂಧಿಸಲಾಗಿದೆ. ಫೆ.12ರಂದು ನಡೆದ ಗಲಾಟೆಯಲ್ಲಿ ಗನ್ ಹಿಡಿದುಕೊಂಡಿರುವ ವಿಡಿಯೋ ಪ್ರದರ್ಶಿಸಿದ್ದು ಅದರ ಆಧಾರದ ಮೇಲೆ‌ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದರ್ಶನ್‌ ಎಂಬಾತನು ಮಕ್ಕಳ ಆಟಿಕೆಯ ನಕಲಿ ಏರ್ ಪಿಸ್ತೂಲ್ ಅನ್ನು ತೋರಿಸಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ. ಈ ಬಗ್ಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

error: Content is protected !!