Drinking Water | ನೀರಿನ ಕಂದಾಯ ಪಾವತಿಸಿಲ್ಲವೇ? ಕಡಿತಗೊಳ್ಳಲಿದೆ ಸಂಪರ್ಕ, ಎಲ್ಲೆಲ್ಲಿ ಕೌಂಟರ್ ಸೇವೆ ಲಭ್ಯ

Water tap

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಮಾ.10ರಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

READ | ಕುವೆಂಪು ವಿವಿ ನೂತನ ಕುಲಪತಿಯಾಗಿ ಡಾ.ಯು.ಆರ್.ಅನಂತಮೂರ್ತಿ ಅವರ ಪುತ್ರ ಪ್ರೊ.ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ

ಎಲ್ಲೆಲ್ಲಿ ಕೌಂಟರ್?
ಶರಾವತಿನಗರ ಎ ಬ್ಲಾಕ್ ನರ್ಸ್ ಕ್ವಾಟ್ರಸ್, ಆದಿಚುಂಚನಗಿರಿ ಶಾಲೆ ಹತ್ತಿರ, ಕೆನರಾ ಬ್ಯಾಂಕ್ ಹತ್ತಿರ ಕಾಶೀಪುರ ಸರ್ಕಲ್, ಚನ್ನಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮಲವಗೊಪ್ಪ, ಅಶೋಕನಗರ ನಂದಿನಿ ಬೂತ್ ಹತ್ತಿರ, ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಹತ್ತಿರ ಕೆ.ಆರ್.ಪುರಂ ರಸ್ತೆ ಈ ಎಲ್ಲ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!