BY Vijayendra | ಈಶ್ವರಪ್ಪನವರಿಗೆ ಈಗಲೂ ಕಾಲ‌ ಮಿಂಚಿಲ್ಲ, ಕೈಮುಗಿಯುತ್ತೇನೆ ದಯವಿಟ್ಟು ವಾಪಸ್ ಬನ್ನಿ: ವಿಜಯೇಂದ್ರ

BY Vijayendra

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ‌ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಈಗಲೂ ಕಾಲ ಮಿಂಚಿಲ್ಲ, ವಾಪಸ್ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು. 

KS Eshwarappa

READ | ದೆಹಲಿಯಿಂದ ಶಿವಮೊಗ್ಗಕ್ಕೆ ವಾಪಸ್ ಬಂದ ಈಶ್ವರಪ್ಪ, ಸ್ಪರ್ಧೆಯ‌ ಬಗ್ಗೆ ಹೇಳಿದ್ದೇನು?

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಪಕ್ಷ ಕಟ್ಟಲು ಈಶ್ವರಪ್ಪ ಅವರ ಪಾತ್ರವೂ ಇದೆ. ಈಶ್ವರಪ್ಪನವರು ಹಿರಿಯರಾಗಿದ್ದು, ಅವರ ಶ್ರಮದ ಫಲವಾಗಿ ಪಕ್ಷ ದೊಡ್ಡದಾಗಿ ಬೆಳೆದಿದೆ. ಯಾವುದೋ ಪರಿಸ್ಥಿತಿಗಳಿಂದಾಗಿ ಈ ಸನ್ನಿವೇಶ ಸೃಷ್ಟಿಯಾಗಿದೆ. ಈಶ್ವರಪ್ಪನವರು ಮನಸ್ಸು ಮಾಡಿದರೆ ದೆಹಲಿಗೆ ಹೋಗಿ ನಾಯಕರೊಂದಿಗೆ ಮಾತನಾಡಲಾಗುವುದು ಅವರೊಂದಿಗೆ ನಾವೂ ಬರಲು ಸಿದ್ಧರಿದ್ದೇವೆ” ಎಂದರು.
ರಾಜ್ಯದಲ್ಲಿ 28 ಸೀಟ್ ನಮಗೆ
“ರಾಜ್ಯದಲ್ಲಿ‌ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ರಾಜ್ಯದಲ್ಲಿ ಬಿಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ‌ಕಂಡು ಕಾಂಗ್ರೆಸ್ ನಿದ್ದೆಗಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ” ಎಂದು ಹೇಳಿದರು.
ಪ್ರಚಾರಕ್ಕೆ ಬರಲಿದ್ದಾರೆ ಮೋದಿ, ಶಾ, ಯೋಗಿ
ರಾಜ್ಯದಲ್ಲಿ ಅಭ್ಯರ್ಥಿಗಳ ಮತ‌ ಪ್ರಚಾರಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದರು.

error: Content is protected !!