Shimoga rain | ಶಿವಮೊಗ್ಗದಲ್ಲಿ ಮೊದಲ ಮಳೆಗೆ ಭಾರಿ ಅನಾಹುತ, 18 ಕುರಿ ಬಲಿ, ಎಲ್ಲಿ ಏನಾಗಿದೆ?

Kuri savu ayanur

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮೊದಲ ಮಳೆ ಹಲವು ಆವಾಂತರಗಳನ್ನು ಸೃಷ್ಟಿಸಿದೆ. ಶಿವಮೊಗ್ಗ ನಗರದಲ್ಲಿ ತುಂತುರು ಮಳೆಯಾದರೆ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಳೆ ಸುರಿದಿದೆ.

READ | ಈಶ್ವರಪ್ಪನವರಿಗೆ ಈಗಲೂ ಕಾಲ‌ ಮಿಂಚಿಲ್ಲ, ಕೈಮುಗಿಯುತ್ತೇನೆ ದಯವಿಟ್ಟು ವಾಪಸ್ ಬನ್ನಿ: ವಿಜಯೇಂದ್ರ

ತೀರ್ಥಹಳ್ಳಿಯಲ್ಲಿ ಸಂಜೆ ವೇಳೆಯಲ್ಲಿ ಅರ್ಧ ಗಂಟೆ ವರುಣ ತನ್ನ ಕೃಪೆಯನ್ನು ತೋರಿಸಿದ್ದಾನೆ. ಆಯನೂರು ಸಮೀಪ ರಸ್ತೆಯ ಮೇಲೆ ಮರವು ಉರುಳಿ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಸುಮಾರು 20 ನಿಮಿಷಗಳ ಕಾಲ ಉತ್ತಮ ಮಳೆಯಾಗಿದೆ.
ಸಿಡಿಲಿಗೆ 18 ಕುರಿಗಳ ಬಲಿ

Aynur tree fall
ಶಿವಮೊಗ್ಗ ತಾಲೂಕಿನ ಆಯನೂರು ಕೋಟೆಯಲ್ಲಿ ಶುಕ್ರವಾರ ಸಿಡಿಲು ಬಡಿದು 18 ಕುರಿಗಳು ಮೃತಪಟ್ಟಿವೆ. ಕುರಿಗಳ ಮಾಲೀಕ ಝಾಕೀರ್ ಹುಸೇನ್ ಎಂಬುವವರು ಮೇಯಿಸಲು ಬಯಲಿಗೆ ಹೋಗಿದ್ದಾರೆ. ಏಕಾಏಕಿ ಮಳೆ ಶುರುವಾಗಿದ್ದು, ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ಪಶುಸಂಗೋಪನಾ ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಗ್ರಾಮದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

error: Content is protected !!