Geetha Shivarajkumar property | 11 ಕೆಜಿ ಬಂಗಾರ, 30 ಕೆಜಿ ಬೆಳ್ಳಿ, ಐಷಾರಾಮಿ‌ ಕಾರು, ಗೀತಾ- ಶಿವರಾಜಕುಮಾರ್ ಬಳಿ ಇರುವ ಆಸ್ತಿ ಎಷ್ಟು? ಕಾರೆಷ್ಟಿವೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Geetha Shivarajkumar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: (LOKASABHA ELECTION 2024) ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ (Geetha shivarajkumar) ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಈ ಕುರಿತು ಅಫಿಡೇವಿಟ್ ನಲ್ಲಿ ಪೂರ್ಣ ಮಾಹಿತಿ ನೀಡಿದ್ದಾರೆ.
ನಟ ಶಿವರಾಜಕುಮಾರ್, ಪತ್ನಿ‌ ಗೀತಾ ಬಳಿ ಒಟ್ಟು ₹89.06 ಕೋಟಿ ಆಸ್ತಿ‌ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಗೀತಾ ಶಿವರಾಜಕುಮಾರ್‌ ಬಳಿ ₹5.54 ಕೋಟಿ ಹಾಗೂ ಶಿವರಾಜಕುಮಾರ್‌ ₹18 ಕೋಟಿ ಚರಾಸ್ತಿ ಇದೆ.

Geeta shivrajkumar 2
ಸಕ್ರೆಬೈಲು ಆನೆಬಿಡಾರದಲ್ಲಿ ನಟ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ನಾಮಪತ್ರ ಸಲ್ಲಿಕೆ‌ ಮುನ್ನಾದಿನವಾದ ಭಾನುವಾರ ಆನೆ ಸವಾರಿ ಮಾಡಿದರು.

READ | ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಬಳಿ‌ ಆಸ್ತಿ‌‌ ಎಷ್ಟಿದೆ? ಈಶ್ವರಪ್ಪ ಮೇಲಿದೆ ಭಾರೀ ಸಾಲ!

ಆಸ್ತಿ‌ ಕುರಿತಾದ ಹೈಲೈಟ್ಸ್

ಪತಿ, ಪತ್ನಿಯದ್ದು ಕೋಟಿಗಟ್ಟಲೇ ಆಸ್ತಿ‌ | ಗೀತಾ ಬಳಿ ₹40.04 ಕೋಟಿ, ಪತಿ ಶಿವರಾಜಕುಮಾರ್‌ ಬಳಿ ₹49 ಕೋಟಿ ಆಸ್ತಿ ಇರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ₹89.04 ಕೋಟಿ ಆಸ್ತಿ ಇದೆ.

ವಾರ್ಷಿಕ ಆದಾಯವೆಷ್ಟು? | 2022-23ರಲ್ಲಿ ತಮ್ಮ ವಾರ್ಷಿಕ ಆದಾಯ ₹1.48 ಕೋಟಿ ಎಂದು ಗೀತಾ ಶಿವರಾಜ್‌ ಕುಮಾರ್‌ ಘೋಷಿಸಿಕೊಂಡಿದ್ದಾರೆ. ಅದೇ ಶಿವರಾಜಕುಮಾರ್ ಅವರ ಬಳಿ ಆದಾಯ ₹2.97 ಕೋಟಿ ಇರುವುದಾಗಿ ಹೇಳಿಕೊಳ್ಳಲಾಗಿದೆ.

* ಗೀತಾ 11 ಕೆಜಿ ಚಿನ್ನಾಭರಣದ ಮಾಲೀಕರು | ಗೀತಾ ಅವರ ಬಳಿ 11.54 ಕೆಜಿ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇವುಗಳ ಮೌಲ್ಯ ₹3.5 ಕೋಟಿ ಆಗಿದೆ. 30 ಕೆಜಿ ಬೆಳ್ಳಿ ಸಹ ಇವರ ಬಳಿ‌ ಇದೆ.

ಲಕ್ಷಾಂತರ ನಗದು | ಗೀತಾ ಶಿವರಾಜ್‌ ಕುಮಾರ್‌ ಕೈಯಲ್ಲಿ ₹2 ಲಕ್ಷ ನಗದು ಇದೆ. ಶಿವರಾಜಕುಮಾರ್ ಬಳಿ ₹22 ಲಕ್ಷ ನಗದಿದೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ದಂಪತಿಯ ಹೆಸರಿನಲ್ಲಿ ಕೋಟ್ಯಂತರ ಠೇವಣಿ ಇದೆ.

* ಕೋಟ್ಯಂತರ ಸಾಲ ನೀಡಿದ ದಂಪತಿ | ದಂಪತಿ‌ ಕೋಟ್ಯಂತರ ಸಾಲ ನೀಡಿದ್ದಾರೆ. ಮುತ್ತು ಸಿನಿ ಸರ್ವೀಸಸ್‌ಗೆ ಗೀತಾ ₹25.60 ಲಕ್ಷ, ಶಿವರಾಜಕುಮಾರ್‌ ₹1.64 ಕೋಟಿ, ಗೀತಾ ಪಿಕ್ಚರ್ಸ್‌ಗೆ ಶಿವಣ್ಣ ₹6 ಕೋಟಿ ಸಾಲ ನೀಡಿದ್ದರೆ, ಇತರರಿಗೆ ₹2.13 ಕೋಟಿ ಸಾಲ ನೀಡಿದ್ದಾರೆ.

* ಗೀತಾ ಬಳಿ‌ ‌ಐಷಾರಾಮಿ‌ ಹೈಬ್ರಿಡ್ ಕಾರು | ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗದಲ್ಲಿ ಪ್ರಚಾರಕ್ಕೆ‌ ಬಳಸುತ್ತಿರುವ ಕಾರು ಗೀತಾ ಅವರದ್ದಾಗಿದ್ದು, ಅದರೆ ಮೌಲ್ಯ ಬರೋಬ್ಬರಿ ₹1.07 ಕೋಟಿ. ಟೋಯೊಟಾ ಹೈಬ್ರಿಡ್ ಕಾರಿನ ಒಡತಿ‌ ಗೀತಾ ಆಗಿರುವುದಾಗಿ ಅಫಿಡೇವಿಡ್ ನಲ್ಲಿ‌ ಮಾಹಿತಿ ನೀಡಲಾಗಿದೆ. ಶಿವಣ್ಣ ಬಳಿ ಟೊಯೋಟಾ ಫಾರ್ಚುನರ್‌, ಮಾರುತಿ ಎರ್ಟಿಗಾ ಹಾಗೂ ವೋಲ್ವೋ ಎಸ್‌ 90 ಕಾರುಗಳಿವೆ. ಇವುಗಳ ಮೌಲ್ಯ ₹87.70 ಲಕ್ಷ ಎಂದು ತಿಳಿಸಲಾಗಿದೆ.

* ಕನಕಪುರದಲ್ಲಿ ₹54 ಕೋಟಿ ಮೌಲ್ಯದ ಮನೆ | ಗೀತಾ ಮತ್ತು ಶಿವರಾಜಕುಮಾರ್ ಅವರದ್ದು‌‌ ಕನಕಪುರದಲ್ಲಿ ಒಂದು ಐಷಾರಾಮಿ ‌ಮನೆ ಇದೆ. ಅದರ ಮೌಲ್ಯ ಬರೋಬ್ಬರಿ ₹54 ಕೋಟಿ. ಮಾನ್ಯತಾ ರೆಸಿಡೆನ್ಸಿಯಲ್ಲಿ 1.48 ಎಕರೆಯಲ್ಲಿ ಮನೆ ಇದ್ದು, ಇದರ ಮೌಲ್ಯ ₹54 ಕೋಟಿ ಇದೆ. ವಿಶೇಷವೆಂದರೆ, ಮನೆಯು ಮುಕ್ಕಾಲು ಎಕರೆಯಲ್ಲಿ ನಿರ್ಮಾಣ ಮಾಡಲಾಗಿದೆ.

ಕೃಷಿ ಭೂಮಿಯೂ ಇದೆ | ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಇದೆ. ಇದರ ಮೌಲ್ಯ ಒಟ್ಟು ₹3 ಕೋಟಿ. ಶಿವಣ್ಣಗೆ ತಮಿಳುನಾಡಿನ ಈರೋಡ್‌ನಲ್ಲಿ 3.46 ಎಕರೆ ವಿಸ್ತೀರ್ಣದ ಇನ್ನೊಂದು ಕೃಷಿ ಭೂಮಿಯೂ ಇದೆ. ಇದರ ಮೌಲ್ಯ ₹2.50 ಕೋಟಿ. ಕೋರಮಂಗಲದಲ್ಲಿ ಗೀತಾ ಹೆಸರಲ್ಲಿ ವಾಣಿಜ್ಯ ಕಟ್ಟಡವಿದ್ದು ಇದರ ಮೌಲ್ಯ ₹6 ಕೋಟಿ.

* ಇಬ್ಬರ ಬಳಿ‌ ಇರುವ ಸ್ಥಿರಾಸ್ತಿ | ಇಬ್ಬರ ಬಳಿ ಸ್ಥಿರಾಸ್ತಿ ₹34.50 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಶಿವರಾಜಕುಮಾರ್‌ ₹31 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

* ಕೋಟಿ‌ ಕೋಟಿ ಸಾಲ | ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರ ಹೆಸರಿನಲ್ಲಿ ಕೋಟಿ ಕೋಟಿ ಸಾಲ‌ ಇದೆ. ಶಿವರಾಜಕುಮಾರ್‌ ಗೆ ಕೋಟೆಕ್‌ ಬ್ಯಾಂಕ್‌ನಲ್ಲಿ ₹3.94 ಕೋಟಿ ಸಾಲ ಇದೆ. ಸಿನಿಮಾಗಳಿಗಾಗಿ ಹಾಗೂ ಜಾಹೀರಾತುಗಳಿಗಾಗಿ ಬರೋಬ್ಬರಿ ₹13.06 ಕೋಟಿ ಮುಂಗಡ ಪಡೆದಿದ್ದಾರೆ. ಗೀತಾಗೆ ₹7.14 ಕೋಟಿ ಸಾಲವಿದೆ. ಶಿವರಾಜಕುಮಾರ್‌ 17.01 ₹ಕೋಟಿ ಸಾಲ ಹೊಂದಿದ್ದಾರೆ.

KSE MADHU
ನಾಮಪತ್ರ ಸಲ್ಲಿಸಲು ಹೋದಾಗಿನ ಕ್ಷಣ.

error: Content is protected !!