Dead body | ಮೆಗ್ಗಾನ್ ಆಸ್ಪತ್ರೆ ಹೊರಗೆ ಬಿದ್ದಿತ್ತು ನವಜಾತ ಶಿಶುವಿನ ಶವ, ಮುಂದೇನಾಯ್ತು?

Meggan Hospital

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೆಗ್ಗಾನ್ ಆಸ್ಪತ್ರೆಯ ಹೊರಭಾಗದ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಬುಧವಾರ ಪತ್ತೆಯಾಗಿದೆ. ಶವವನ್ನು ಕಂಡಿದ್ದೇ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

Crime logo
ಅದೇ ಮಾರ್ಗವಾಗಿ ಸಾಗುತ್ತಿದ್ದ ಪಾಶಾ ಎಂಬಾತ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ಆಸ್ಪತ್ರೆಯ ಬೆಡ್ ಶೀಟಿನಲ್ಲಿ ಶಿಶುವಿನ ಶವವು ಸುತ್ತಿಡಲಾಗಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇದೇ ಮೊದಲೇನಲ್ಲ
ಈ ಹಿಂದೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲೇ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಬೆಳಗಿನ ಜಾವ ಅದನ್ನು ನಾಯಿಯೊಂದು ಕೊಚ್ಚಿಕೊಂಡು ಓಡಾಡುತ್ತಿತ್ತು. ಆಗ ಮೆಗ್ಗಾ‌ನ್ ಆಡಳಿತ‌ ಮಂಡಳಿ ಆ ಮಗು ತಮ್ಮಲ್ಲಿ ಜನಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿತ್ತು.‌ ಇಂತಹ ಘಟನೆಗಳು ಪದೇ ಪದೆ ಆಸ್ಪತ್ರೆಯೊಳಗೆ ಅಥವಾ ಹೊರಗೆ ನಡೆಯುತ್ತಲೇ‌‌ ಇವೆ.

READ | ಕೊಟ್ಟಿದ್ದ ಸಾಲ ಕೇಳಿದ್ದಕ್ಕೆ  ನಡೀತು ಮರ್ಡರ್, ತಪ್ಪೊಪ್ಪಿಕೊಂಡ ಆರೋಪಿ

error: Content is protected !!