Voting | ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಎಷ್ಟು ಮತದಾನವಾಗಿದೆ, ಬೆಳಗ್ಗೆಯಿಂದ ಹೇಗಿದೆ ಟ್ರೆಂಡ್? ಎರಡು ಕಡೆ ಮತದಾನ ವಿಳಂಬ

Vote 4

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.44.98ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಝಳ ಅಧಿಕ ಇರುವುದರಿಂದ ಸಾರ್ವಜನಿಕರು ಬೇಗವೇ ಬಂದು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ನಿರಂತರವಾಗಿ ಮತದಾನವಾಗುತ್ತಿದ್ದು, ಉತ್ತಮ ಮತದಾನ ನಡೆಯುತ್ತಿದೆ.

READ | ರಾಜ್ಯದಲ್ಲೇ ಓಟಿಂಗ್‍ನಲ್ಲಿ ಶಿವಮೊಗ್ಗ ನಂ.1, ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ?

ಎರಡು ಕಡೆಗಳಲ್ಲಿ ಕೈಕೊಟ್ಟ ಇವಿಎಂ
ಶಿವಮೊಗ್ಗ ನಗರದ ದುರ್ಗಿಗುಡಿ ಪ್ರೌಢ ಶಾಲೆ ಮತ್ತು ಸೊರಬ ತಾಲೂಕು ಚಿಕ್ಕಪೇಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 159ರಲ್ಲಿ ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭವಾಗಿದೆ.

ಎಲ್ಲೆಲ್ಲಿ ಎಷ್ಟು ಮತದಾನ? (ಶೇ.)
ಕ್ಷೇತ್ರ ಬೆಳಗ್ಗೆ 9 ಬೆಳಗ್ಗೆ 11 ಮಧ್ಯಾಹ್ನ 1
ಬೈಂದೂರು 13.66 31.22 48.09
ಭದ್ರಾವತಿ 10.37 24.33 41.6
ಸಾಗರ 12.66 29.61 47.46
ಶಿಕಾರಿಪುರ 9.28 24.64 44.25
ಶಿವಮೊಗ್ಗ 12.77 26.78 41
ಶಿವಮೊಗ್ಗ ಗ್ರಾಮಾಂತರ 11.6 26.99 46.01
ಸೊರಬ 9.76 25.13 44.38
ತೀರ್ಥಹಳ್ಳಿ 11.87 28.64 48.08

one click many news logo

error: Content is protected !!