Breaking news | ಮತದಾನ ಮಾಡಲು ತೆರಳುತ್ತಿದ್ದ ಯುವಕ ಸಾವು

Breaking news1

 

 

ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ಮತದಾನ ಮಾಡಲು ತೆರಳುತ್ತಿದ್ದ ಯುವಕನೊಬ್ಬ ಶಿಕಾರಿಪುರ ತಾಲೂಕು ಹಿತ್ತಲ ಬಳಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಭದ್ರಾವತಿ ಮೂಲದ ಮಂಜುನಾಥ್(32) ಮೃತರು. ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಆತ ಮೃತಪಟ್ಟಿದ್ದಾನೆ.

READ | ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಎಷ್ಟು ಮತದಾನವಾಗಿದೆ, ಬೆಳಗ್ಗೆಯಿಂದ ಹೇಗಿದೆ ಟ್ರೆಂಡ್? ಎರಡು ಕಡೆ ಮತದಾನ ವಿಳಂಬ 

ಅಕ್ಕನ ಮನೆಯಿಂದ ತೆರಳುತ್ತಿದ್ದ
ಮಂಜುನಾಥ್ ಅವರ ಅಕ್ಕನಿಗೆ ಚುರ್ಚಿಗುಂಡಿಯಲ್ಲಿ ಮದುವೆ ಮಾಡಿಕೊಡಲಾಗಿದೆ. ಈತ ಈಸೂರಿನಲ್ಲಿ ಕೆಲಸ ಮಾಡುತ್ತಿದ್ದ. ಮತದಾನ ಮಾಡುವುದಕ್ಕೆಂದೇ ಭದ್ರಾವತಿಗೆ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime logo

error: Content is protected !!