ARECA NUT THEFT | ಹೊಳೆಹೊನ್ನೂರಿನಲ್ಲಿ ರಾತ್ರೋರಾತ್ರಿ 4 ಮೂಟೆ ಅಡಿಕೆ ಮಾಯ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ನಾಲ್ಕು ಮೂಟೆ ಅಡಿಕೆಯನ್ನು ಕಳ್ಳತನ ಮಾಡಲಾಗಿದೆ.

ಮನೆಯ ಮುಂದಿರುವ ಗೋದಾಮಿನಲ್ಲಿ ಸಂಸ್ಕರಣೆ ಮಾಡಿ ದಾಸ್ತಾನು ಮಾಡಲಾಗಿದ್ದ ಅಡಿಕೆಯನ್ನು ಭಾನುವಾರ ರಾತ್ರಿ ಕಳವು ಮಾಡಲಾಗಿದೆ. ಅಗರದಹಳ್ಳಿ ಗ್ರಾಮದ ನಿವಾಸಿ ಹರೀಶ್ ಎಂಬುವವರಿಗೆ ಸೇರಿದ್ದ ಅಡಿಕೆಯನ್ನು ಕಳವು ಮಾಡಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!