BREAKING NEWS | ಶಿವಮೊಗ್ಗದಿಂದ ಇಬ್ಬರು ಗಡಿಪಾರು, ಯಾರ‌್ಯಾರಿಗೆ ಗಡಿಪಾರು ಶಿಕ್ಷೆ?

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರನ್ನು ಗಡಿಪಾರು ಮಾಡಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಆದೇಶಿಸಿದ್ದಾರೆ.
ಹರಿಗೆ ನಿವಾಸಿ ಅರುಣ್ ಅಲಿಯಾಸ್ ಗೂನಾ ಹಾಗೂ ಎಂಕೆಕೆ ರಸ್ತೆಯ ಒಂದನೇ ತಿರುವಿನ ಸಾತು ಅಲಿಯಾಸ್ ಸಾದಿಕ್ ಎಂಬುವವರನ್ನು ಕರ್ನಾಟಕ ಪೊಲೀಸ್ ಅಧಿನಿಯಮ 1963 ಕಲಂ 55 ಅನ್ವಯ ಗಡಿಪಾರು ಆದೇಶಿಸಲಾಗಿದೆ.

READ | ವಾಹನ ಮಾಲೀಕರಿಗೆ ಶುಭ ಸುದ್ದಿ, ಹೊಸ ವಾಹನ ನೋಂದಣಿಗೆ ಇನ್ಮುಂದೆ ಆರ್.ಟಿ.ಒ ಕಚೇರಿಗೆ ಹೋಗಬೇಕಿಲ್ಲ

ಸಾತುಗೆ ಆರು ತಿಂಗಳ ಗಡಿಪಾರು
ಸಾತು ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಈತನ ಮೇಲೆ 19 ಪ್ರಕರಣಗಳು ದಾಖಲಾಗಿರುತ್ತವೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ, 6 ತಿಂಗಳ ಅವಧಿಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಗಡಿಪಾರು ಮಾಡಿ ತೀರ್ಪು ನೀಡಲಾಗಿದೆ.
ಅರುಣ್ ಗೆ ಮೂರು ತಿಂಗಳು ಗಡಿಪಾರು
ಇನ್ನೊಬ್ಬ ಆರೋಪಿ ಅರುಣ್ ಅಲಿಯಾನ್ ಗೂನಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಸಾಬೀತಾಗಿರುವುದರಿಂದ ಮೂರು ತಿಂಗಳು ಅವಧಿಗೆ ಉಪ ವಿಭಾಗದ ಸರಹದ್ದಿನಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2020/11/10/netherlands-parcel/

error: Content is protected !!