ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಕೇಳಿದರೆ ಹುಷಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಿಎ ಎಂದು‌ ನಂಬಿಸಿ ₹15 ಲಕ್ಷ ರೂ. ಮೋಸ

 

 

ಸುದ್ದಿ‌ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಸರ್ಕಾರಿ‌ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರು ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರನಿಗೆ ₹15 ಲಕ್ಷ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಕಡೂರಿನ ಸಾರಿಗೆ ಸಂಸ್ಥೆ ನಿವೃತ್ತ ನೌಕರ ಕೆಂಚಪ್ಪ ಎಂಬುವವರು ಮೋಸ ಹೋದ ವ್ಯಕ್ತಿ.‌ ವಿಶ್ವಾಸ್ ಎಂಬಾತ ತಾನು ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದಿದ್ದಾನೆ.

READ | ಅಳುತ್ತ ತಾಯಿಯಿಂದ ದೂರವಾದ 2 ವರ್ಷದ ಆನೆ ಮರಿ, ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ಆರೈಕೆ ಹೇಗೆ ನಡಿಯುತ್ತದೆ?

ಬೇಡಿಕೆ ಇಟ್ಟಿದ್ದ ಹಣದಲ್ಲಿ ಸ್ವಲ್ಪ‌ ನೇರವಾಗಿ ಇನ್ನುಳಿದ ಹಣ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದಾರೆ. ಹಣ ಕೈಸೇರಿದ್ದೇ ವಿಶ್ವಾಸ್ ಕೈಗೆ ಸಿಕ್ಕಿಲ್ಲ. ನೌಕರಿಯೂ ಕೊಡಿಸಿಲ್ಲ. ಹಣ ವಾಪಸ್ ನೀಡುವಂತೆ ಕೆಂಚಪ್ಪ ಕೇಳಿದ್ದು, ಮನೆಯವರೆಗೂ ಹುಡುಕಿಕೊಂಡು ಹೋಗಿದ್ದಾರೆ. ಆಗ ವಿಶ್ವಾಸ್ ₹1 ಲಕ್ಷ ಚೆಕ್ ನೀಡಿದ್ದಾನೆ.‌ ಅದೂ ಬೌನ್ಸ್ ಆಗಿದೆ. ಹೀಗಾಗಿ, ಮೋ‌ಸ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ.

https://www.suddikanaja.com/2020/11/09/man-cheats-saying-drdo-jobs-and-took-lakhs-of-amount/

error: Content is protected !!