Student Scholarship ಅರ್ಜಿ ಸಲ್ಲಿಸಿದರಷ್ಟೇ ಸಾಲದು, NPCI ಮ್ಯಾಪಿಂಗ್ ಮಾಡದಿದ್ದರೆ ಶುಲ್ಕ ವಿನಾಯಿತಿ ಮೊತ್ತ ರದ್ದು

 

 

ಸುದ್ದಿ‌ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಮೆಟ್ರಿಕ್ ನಂತರದ ಕೋರ್ಸ್‌ ಗಳಲ್ಲಿ (ಪಿಯುಸಿ, ಪದವಿ, ಡಿಪ್ಲೊಮಾ ಮತ್ತು ಇನ್ನಿತರೆ) ವ್ಯಾಸಾಂಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ 2020-21ನೇ ಸಾಲಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಮಂಜೂರಗಿದ್ದರೂ ಕೆಲ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗದ ಕಾರಣ ಶುಲ್ಕ ವಿನಾಯಿತಿ ಮೊತ್ತ ಖಾತೆಗೆ ಜಮಾ ಆಗಿರುವುದಿಲ್ಲ.

READ | ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಗೆ 130 ಹೆಕ್ಟೆರ್ ಬೆಳೆ ನಾಶ, 37 ಮನೆಗಳಿಗೆ ಹಾನಿ, ಎಲ್ಲಿ ಏನೇನು ಅನಾಹುತವಾಗಿದೆ?

ಇಂತಹ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ ಬ್ಯಾಂಕ್‍ಗಳನ್ನು ಸಂಪರ್ಕಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿ ಎನ್‍.ಪಿಸಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ)ಗೆ ಮ್ಯಾಪಿಂಗ್ ಮಾಡಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ತಮಗೆ ಮಂಜೂರಾಗಿರುವ ಶುಲ್ಕ ವಿನಾಯಿತಿ ಮೊತ್ತವು ತನ್ನಿಂತಾನೆ ರದ್ದಾಗುವುದು.

follow us in link treeಆಧಾರ್ ಹೆಸರು ಮಿಸ್‍ ಮ್ಯಾಚ್ ಆಗಿರುವ ವಿದ್ಯಾರ್ಥಿಗಳು ತಮ್ಮ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಇರುವಂತೆ ಆಧಾರ್ ಕಾರ್ಡ್‌ ನಲ್ಲಿಯೂ ಸಹ ಹೆಸರನ್ನು ತಿದ್ದುಪಡಿ ಮಾಡಿಸಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಮಂಜೂರಾಗಿರುವ ಶುಲ್ಕ ವಿನಾಯಿತಿ ಮೊತ್ತವು ತನ್ನಿಂತಾನೆ ರದ್ದಾಗುವುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಲ್ಯಾಣಾಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಭವನ, ಬೈಪಾಸ್ ರಸ್ತೆ, ವಿದ್ಯಾನಗರ, ಶಿವಮೊಗ್ಗ, ದೂರವಾಣಿ ಸಂಖ್ಯೆ : 08182-240078, 9620107660, 9110244314, 9108268265, 7090071541 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

https://www.suddikanaja.com/2020/11/24/epf-pension-amount/

error: Content is protected !!