ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಮಳೆ, ಜನರಲ್ಲಿ ಆತಂಕ, ಕೃಷಿ ಚಟುವಟಿಕೆಗೆ ಗರ

 

 

ಸುದ್ದಿ‌ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಬೆಳಗ್ಗೆ ಅಲ್ಪ ವಿರಾಮ ನೀಡಿದ್ದ ಮಳೆರಾಯ ಸಂಜೆಯ ಹೊತ್ತಿಗೆ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಹೀಗಾಗಿ, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಸಂಜೆಯ ನಂತರ ವರ್ಷಧಾರೆ ಆರಂಭವಾಗಿದ್ದು, ನಿರಂತರ ಸುರಿಯುತ್ತಲೇ ಇದೆ. ಜಿಲ್ಲೆಯ ಸಾಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಒಂದೇ ಸಮ ಮಳೆ ಸುರಿಯುತ್ತಿದೆ.

READ | ಜೋಗ ಪರಿಸರದಲ್ಲಿ ಗುಡುಗು ಸಹಿತ ಭಾರಿ ಮಳೆ

ಕೃಷಿಕರಲ್ಲಿ ಭೀತಿ ಹುಟ್ಟಿಸಿರುವ ಮಳೆ
ಅಡಿಕೆ‌ ಕೊಯ್ಲು, ಮೆಕ್ಕೆ ಜೋಳ ರಾಶಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆ ಮಲೆನಾಡಿನಾದ್ಯಂತ ನಡೆಯುತ್ತಿದೆ. ಆದರೆ, ಮಳೆ ವಿರಾಮ ನೀಡದೇ ಇರುವುದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ರಾಶಿ ಮಾಡಿರುವ ಮೆಕ್ಕೆ ಜಮೀನುಗಳಲ್ಲಿಯೇ ಇಡಲಾಗಿದೆ. ಅವುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ.

follow us in link treeಶಿವಮೊಗ್ಗ ನಗರದಲ್ಲಿ ಢವ ಢವ
ಶಿವಮೊಗ್ಗ ನಗರದಲ್ಲಿ ಸುರಿಯುತ್ತಿರುವ ಮಳೆ ಈಗಾಗಲೇ ತಗ್ಗು ಪ್ರದೇಶದಲ್ಲಿ ವಾಸವಾಗಿರುವವರ ನೆಮ್ಮದಿ ಹಾಳು‌ ಮಾಡಿದೆ. ತಡ ರಾತ್ರಿ ಮಳೆಯ ಆರ್ಭಟ ಜೋರಾಗುತ್ತಿದ್ದಂತೆಯೇ ಎಲ್ಲಿ ಮನೆಯೊಳಗೆ ನೀರು ನುಗ್ಗುತ್ತವೋ ಎಂಬ ಭೀತಿಯಲ್ಲಿ ಜನರು ಇಡೀ ರಾತ್ರಿ ಎಚ್ಚರ ಇರುವಂತಾಗಿದೆ.

https://www.suddikanaja.com/2021/11/20/due-to-heavy-rain-in-shivamogga-loss-of-crop-and-house-damage/

error: Content is protected !!