ಬೈಕ್ ಪಾರ್ಕಿಂಗ್ ಮುನ್ನ ಹುಷಾರ್, ಶಿವಮೊಗ್ಗದಲ್ಲಿದ್ದಾರೆ ಸ್ಪೇರ್ ಪಾರ್ಟ್ ಕಳ್ಳರು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ಸಿಟಿ ಸೆಂಟರ್ ಮಾಲ್ ನ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆ ಮಾಡಲಾಗಿದ್ದ ಬೈಕ್ ನ ಸ್ಪೇರ್ ಪಾರ್ಟ್ ಬಿಚ್ಚಿಕೊಂಡು ಹೋಗಿರುವ ಘಟನೆ ಸೋಮವಾರ ನಡೆದಿದೆ.

ಇಬ್ಬರು ಯುವಕರು ಬೈಕ್ ವೊಂದರ ಅಂದಾಜು 1 ಸಾವಿರ ಮೌಲ್ಯದ ಫುಟ್ ರೆಸ್ಟ್ ಬಿಚ್ಚಿಕೊಂಡು ಪರಾರಿಯಾಗಿದ್ದು, ಬೈಕ್ ಮಾಲೀಕ ಸೆಕ್ಯೂರಿಟಿಯವರ ಗಮನಕ್ಕೆ ತಂದಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

follow us in link treeಯುವಕರಿಬ್ಬರು ಪಾರ್ಕಿಂಗ್ ಜಾಗದಲ್ಲಿ ಸುಮಾರು ಹೊತ್ತು ನಿಂತುಕೊಂಡು ನಂತರ ಫುಟ್ ರೆಸ್ಟ್ ಅನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಮಾಲ್ ಒಳಾಂಗಣದ ಪಾರ್ಕಿಂಗ್ ಜಾಗದಲ್ಲಿಯೇ ಬೈಕ್ ನಿಲುಗಡೆ ಮಾಡಿದ್ದರಿಂದ ಅದರ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡು ಸ್ಪೇರ್ ಪಾರ್ಟ್ ಹಣವನ್ನು ಪರಿಹಾರ ರೂಪದಲ್ಲಿ ನೀಡಿದ್ದಾರೆ.

https://www.suddikanaja.com/2021/09/05/tried-for-theft-in-kuvempu-nagar/

error: Content is protected !!