ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಬಳಿಕ ಬಿಜೆಪಿಯ ಗೆಲುವಿನ ವೇಗ ಮುಂದುವರಿದಿದೆ. ಗುರುವಾರ ಶಿವಮೊಗ್ಗ ಹಾಪ್ ಕಾಮ್ಸ್’ಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತರೇ ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸೋಮಶೇಖರ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ನಾಗೇಶ್ ನಾಯ್ಕ ಉಪಾಧ್ಯಕ್ಷರಾಗಿ ನಗೆ ಬೀರಿದ್ದಾರೆ.
ಸೋಮಶೇಖರ್ ಅವರು 9 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯ್ ಕುಮಾರ್ ಅವರು 7 ಮತಗಳನ್ನು ಪಡೆದರು. ನಾಗೇಶ್ ನಾಯ್ಕ ಅವರು 9 ಮತಗಳನ್ನು ಹಾಗೂ ಕೆ.ವಿ.ಗೌಡ 7 ಮತ ಗಳಿಸಿದರು.ಹಾಪ್ ಕಾಮ್ಸ್’ಗೆ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಅಭಿನಂದಿಸಿದ್ದಾರೆ.