ಆನ್ಲೈನ್‍ನಲ್ಲಿ ಜೂಜಲ್ಲಿ ತೊಡಗಿದ್ದವರು ಅರೆಸ್ಟ್, ಆರೋಪಿಗಳು ಖೆಡ್ಡಕ್ಕೆ ಬಿದ್ದಿದ್ದು ಹೇಗೆ, ಸಿಕ್ಕ ಸಾಮಗ್ರಿಗಳೇನು?

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ (online betting) ನಿಷೇಧಿಸುವ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದಿದ್ದೇ ಪೊಲೀಸ್ ಇಲಾಖೆ ಇಂತಹ ದಂಧೆಯಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿದೆ.
ಭದ್ರಾವತಿಯಲ್ಲಿ ಪ್ಲೇ ಬುಲ್ (play bull) ಹೆಸರಿನ ತಂತ್ರಾಂಶದಲ್ಲಿ ಜೂಜಾಟವಾಡುತ್ತಿ ಇಬ್ಬರನ್ನು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ.

https://www.suddikanaja.com/2021/09/18/bill-proposed-in-assembly-about-online-gambling-and-betting/

READ | ಶಿವಮೊಗ್ಗ ಜಿಲ್ಲೆಗೆ ಮತ್ತೆ ಕೊರೊನಾ ಶಾಕ್, ಒಂದೇ ದಿನ ಸೋಂಕಿನ ಸಂಖ್ಯೆ ಒಂದೂವರೆ ಶತಕ ಸನಿಹ

ಭದ್ರಾವತಿ (bhadravathi) ತಾಲೂಕಿನ ಹೊಸ ಸಿದ್ದಾಪುರದ ತಾರೇಶ್ ಅಲಿಯಾಸ್ ತಾರೇಶ್ ಕುಮಾರ್(27), ಕಡದಕಟ್ಟೆ(kadadakatte )ಯ ಬಿ.ಎಚ್.ರಸ್ತೆ ನಿವಾಸಿ ಚೇತನ್ ಅಲಿಯಾಸ್ ಚೇತನ್ ರಾವ್ (25) ಬಂಧಿತರು. ಜಿಂಕ್ ಲೈನ್ ನ ಅರುಣ್ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಕ್ರಿಕೆಟ್ ಬಿಗ್ ಬ್ಯಾಷ್(cricket big bash), ಆನ್‍ಲೈನ್ ಕ್ಯಾಸಿನೋ(online casio play), ಅಂದರ್ ಬಾಹರ್(andar bahar) ಹೀಗೆ ವಿವಿಧ ಆನ್ಲೈನ್ ಗೇಮ್ ಗಳಿಗಾಗಿ ಜನರಿಂದ ಹಣ ಪಡೆಯುತ್ತಿದ್ದರು.

ಆರೋಪಿಗಳ ಬಳಿ ಸಿಕ್ಕಿದ್ದೇನು?
ದಂಧೆಯ ಬಗ್ಗೆ ಮಾಹಿತಿ ಸಿಕ್ಕಿದ್ದೇ ಸಕ್ರಿಯರಾದ ಭದ್ರಾವತಿ ಪೊಲೀಸರು ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ. ಅವರ ಬಳಿಯಿಂದ 13,000 ರೂಪಾಯಿ ನಗದು, 1.51 ಲಕ್ಷ ರೂಪಾಯಿ ಮೌಲ್ಯದ ಮೂರು ಮೊಬೈಲ್, ಕೃತ್ಯಕ್ಕೆ ಬಳಸಿದ ಎಂಟು ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿಯ ಪ್ರೊಬೇಷನರಿ ಡಿಎಸ್‍ಪಿ ಗಜಾನನ ಸುತಾರ (Gajanan sutar) ಅವರು ಕಾರ್ಯಾಚರಣೆ  ಕೈಗೊಂಡಿದ್ದು, ಆರೋಪಿಗಳ ವಿರುದ್ಧ ನ್ಯೂಟೌನ್ (new town) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಕೈಗೊಂಡಿದ್ದಾರೆ.

error: Content is protected !!