ಗಾರ್ಡನ್ ಏರಿಯಾ ಬ್ಯಾಂಕಿನಲ್ಲಿ ಬೆಂಕಿ ಅವಘಡ, ಆದ ಅನಾಹುತವೆಷ್ಟು?

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾರ್ಡನ್ ಏರಿಯಾದ ಬ್ಯಾಂಕ್ ವೊಂದರಲ್ಲಿ ಶುಕ್ರವಾರ ಬೆಳಗಿನ ಜಾವ ಬೆಂಕಿ ಅನಾಹುತ ಸಂಭವಿಸಿದ್ದು, ಹೆಚ್ಚೇನು ನಷ್ಟವಾಗಿಲ್ಲ.
ಗಾರ್ಡನ್ ಏರಿಯಾ(Garden area)ದ ಮೂರನೇ ಕ್ರಾಸ್ ನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ (Bank of India) ಶಾಖೆಯಲ್ಲಿ ಅಗ್ನಿ ಅವಘಡ(Fire accident) ವಾಗಿದೆ. ಮೂಲಗಳ ಪ್ರಕಾರ, ಅಂದಾಜು 10 ಸಾವಿರ ರೂಪಾಯಿ ಮೌಲ್ಯದ ನಷ್ಟವಾಗಿರುವುದು ತಿಳಿದುಬಂದಿದೆ.
ರೆಕಾರ್ಡ್ ರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್
ರೆಕಾರ್ಡ್ ರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಕಟ್ಟಡದ ಕಿಟಕಿಗಳಿಂದ ದಟ್ಟ ಹೊಗೆ ಹೊರಗೆ ಬರಲಾರಂಭಿಸಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ರೆಕಾರ್ಡ್ ರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಬೆಂಕಿ ಹೆಚ್ಚು ಪಸರಿಸಿಲ್ಲ. ಇನ್ನೂ ಸ್ವಲ್ಪ ವಿಳಂಬವಾಗಿದ್ದರು ಕಂಪ್ಯೂಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗುವ ಸಾಧ್ಯತೆ ಇತ್ತು. ಆದರೆ, ಸಕಾಲಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದರ ಪರಿಣಾಮ ಹೆಚ್ಚೇನೂ ಅನಾಹುತ ನಡೆದಿಲ್ಲ.

https://www.suddikanaja.com/2021/11/25/electrical-short-circuit-has-caused-the-burning-of-9-household-items-at-sagara-villagers-have-expressed-outrage-against-mescom/

error: Content is protected !!