ಕಚೇರಿ ಅವಧಿಯಲ್ಲಿ ಯಾವಾಗ ಬೇಕಾದ್ರು ಡಿಸಿಗೆ ಜನ ದೂರು ನೀಡಬಹುದು: ಡಾ.ಆರ್.ಸೆಲ್ವಮಣಿ

 

 

ಸುದ್ದಿ ಕಣಜ.ಕಾಂ | DISTRICT | DC SAMVADA
ಶಿವಮೊಗ್ಗ: ಜನ ಕಚೇರಿ ಅವಧಿಯಲ್ಲಿ ಯಾವಾಗ ಬೇಕಾದರೂ ತಮಗೆ ಭೇಟಿ ಮಾಡಬಹುದು‌. ಅಹವಾಲುಗಳನ್ನು ನೀಡಬಹುದು ಎಂದು ನೂತನ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ನಿಂದ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಭೇಟಿಗೆ ಯಾವುದೇ ಸಮಯ ನಿಗದಿಪಡಿಸುವುದಿಲ್ಲ. ಸಭೆ ಇದ್ದ ಸಂದರ್ಭದಲ್ಲಿ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಹೊರತುಪಡಿಸಿದರೆ ತಾವು ಕಚೇರಿಯಲ್ಲಿದ್ದಾಗ ಸಾರ್ವಜನಿಕರು ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.

READ | ‘ಚಿಪ್ಪು ಹಂದಿ’ಗೆ ಪಶ್ಚಿಮಘಟ್ಟದಲ್ಲಿ ಬೇಕಿದೆ ರಕ್ಷಣೆ, ಪ್ರಕೃತಿಯಲ್ಲಿ ಏನಿದರ ವಿಶೇಷ, ಕಾನೂನಿನಲ್ಲಿ ಯಾವ ಸ್ಥಾನವಿದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಮಲೆನಾಡಿಗರ ಸಮಸ್ಯೆಗಳಿಗೆ ಪರಿಹಾರ
ಜಿಲ್ಲೆಯಲ್ಲಿ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಅದರೊಂದಿಗೆ ಹಲವು ವರ್ಷಗಳೊಂದಿಗೆ ಮಲೆನಾಡಿಗರಿಗೆ ಕಾಡುತ್ತಿರುವ ಬಗರ್ ಹುಕುಂ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶರಾವತಿ, ಚಕ್ರಾ-ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸಲಾಗುವುದು. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಕ್ರಮ ಕ್ವಾರಿಗೆ ಅವಕಾಶವಿಲ್ಲ
ಅಕ್ರಮ ಮರಳುಗಾರಿಕೆ, ಅಕ್ರಮ ಕ್ವಾರಿ ನಡೆಸಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳ‌ನ್ನು ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ರಜೆಗಳಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.

https://www.suddikanaja.com/2022/01/01/cavid-vaccine-for-children-under-18-years-available-in-shimoga-health-department-requested-to-take-use-of-it/

error: Content is protected !!