ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಬಿದ್ದು ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲು ಹತ್ತುವಾಗ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

BDVT FB GROUP LINKಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರಕಾಶ್ (57) ಎಂಬುವವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಇಂಟರ್ ಸಿಟಿ ರೈಲಿನಲ್ಲಿ ಬರುತ್ತಿದ್ದ ಇವರು ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಿದ್ದರಿಂದ ಈತ ಕೆಳಗೆ ಇಳಿದಿದ್ದ. ರೈಲು ಇನ್ನೇನು ಹೊರಡುತಿತ್ತು. ಗಡಿಬಿಡಿಯಲ್ಲಿ ಹತ್ತಲು ಯತ್ನಿಸಿದ್ದಾರೆ. ಆದರೆ, ಕಾಲು ಜಾರಿದ್ದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!