ಭದ್ರಾವತಿಯ ವ್ಯಕ್ತಿಗೆ ನಕಲಿ ಚಿನ್ನ ನೀಡಿ 10 ಲಕ್ಷ ರೂ. ದೋಖಾ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

BDVT FB GROUP LINKಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಚೌಡಪ್ಪ ಎಂಬುವವರಿಗೆ ಬಳ್ಳಾರಿಯ ಎಂ.ಕೆ.ನಗರದ ದುಗ್ಗಪ್ಪ ಎಂಬುವವರು ಮೋಸ ಮಾಡಿದ್ದಾರೆ. ಚೌಡಪ್ಪ ಅವರಿಗೆ ಮಂತ್ರಾಲಯದಲ್ಲಿ ವ್ಯಕ್ತಿಯು ಪರಿಚಯವಾಗಿದ್ದಾನೆ. ತಮ್ಮ ಬಳಿ ಚಿನ್ನದ ನಾಣ್ಯಗಳಿರುವ ಬಗ್ಗೆ ಪ್ರಸ್ತಾಪಿಸಿದ್ದಾನೆ. ಆದರೆ, ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದರಿಂದ ಚೌಡಪ್ಪ ಅವರ ಪತ್ನಿಗೆ ಕರೆ ಮಾಡಿ ತಮಗೆ ನಾಣ್ಯ ಮಾರಾಟದ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಅಲವತ್ತುಕೊಂಡಿದ್ದಾನೆ.

READ | ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಬಿದ್ದು ವ್ಯಕ್ತಿ ಸಾವು

ಮೊದಲು ಅಸಲಿ ನಂತರ ನಕಲಿ ನಾಣ್ಯ
ಜನವರಿ 14ರಂದು ಒಂದು ನಾಣ್ಯವನ್ನು ತಂದು ನೀಡಿದ್ದಾನೆ. ಇದನ್ನು ನಂಬಿ ನಾಣ್ಯವನ್ನು ತರಿಸಿಕೊಳ್ಳಲಾಗಿದೆ. ಒಟ್ಟು 1 ಕೆಜಿ ಚಿನ್ನದ ಬಣ್ಣದ ನಾಣ್ಯಗಳನ್ನು ನೀಡಿ 10 ಲಕ್ಷ ರೂಪಾಯಿ ಪಡೆದಿದ್ದಾರೆ. ನಾಣ್ಯಗಳನ್ನು ಗಟ್ಟಿ ಮಾಡಿಸಲು ತೆಗೆದುಕೊಂಡು ಹೋದಾಗ ಅವುಗಳು ನಕಲಿ ಎಂಬುವುದು ಬೆಳಕಿಗೆ ಬಂದಿದೆ. ಚೌಡಪ್ಪ ಅವರು ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

error: Content is protected !!