144 ತೆರವು ಸಹಜ ಸ್ಥಿತಿಗೆ ಶಿವಮೊಗ್ಗ, ಅಲ್ಲಲ್ಲಿ ಖಾಕಿ ಕಾವಲು

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ಹಿಜಾಬ್-ಕೇಸರಿ ಶಾಲು ವಿವಾದ ಸೃಷ್ಟಿಸಿದ ಗಲಾಟೆಯಿಂದಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ, ನಗರ ಶಾಂತವಾಗಿರುವುದರಿಂದ ನಿಷೇಧಾಜ್ಞೆ ತೆರವುಗೊಳಿಸಲಾಗಿದೆ.

VIDEO REPORT

ಕಲಂ 144 ಹಿಂಪಡೆದಿದ್ದೇ ಶಿವಮೊಗ್ಗ ನಗರಕ್ಕೆ ಎಂದಿನಂತಹ ಕಳೆ ಬಂದಿದೆ. ವ್ಯಾಪಾರ ವಹಿವಾಟುಗಳು ನಿತ್ಯದಂತೆ ನಡೆಯುತ್ತಿವೆ. ರಸ್ತೆಗಳಲ್ಲಿ ಜನಸಂಚಾರವೂ ಸಹಜವಾಗಿದೆ.

READ | ಶಿವಮೊಗ್ಗದಲ್ಲಿ ಕಲ್ಲು ತೂರಾಟ ಕೇಸ್, 9 ಜನರನ್ನು ಅರೆಸ್ಟ್ ಮಾಡಿದ ಪೊಲೀಸ್

ನಿಷೇಧಾಜ್ಞೆ ತೆರವುಗೊಳಿಸಿದರೂ ಮುಂಜಾಗರೂಕತೆ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಮುಂದುವರಿದಿದೆ. ಅಮೀರ್ ಅಹಮ್ಮದ್ ವೃತ್ತದಲ್ಲಿ ಕೆಎಸ್.ಆರ್.ಪಿ ವಾಹನವಿದ್ದು, ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.

error: Content is protected !!