ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಬಸವನಗುಡಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಜಯನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಸವನಗುಡಿ ನಿವಾಸಿ ಅನಿಲ್(23) ಬಂಧಿತ. ಆರೋಪಿ ಬಳಿಯಿಂದ ಅಂದಾಜು 9.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 316 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 16,000 ರೂಪಾಯಿ ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.

READ | ತಾಯಿಯ ತಿಥಿಗೆ ಹೋದಾಗ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ತಾಯಿಯ ತಿಥಿಗೆ ಹೋಗಿದ್ದಾಗ ಕಳ್ಳತನ
ಈತ ಫೆಬ್ರವರಿ 13ರಂದು ಬಸವನಗುಡಿಯಲ್ಲಿರುವ ಮನೆಗೆ ಬೀಗ ಹಾಕಿಕೊಂಡು ತನ್ನ ತಾಯಿಯ ತಿಥಿ ಕಾರ್ಯಕ್ರಮಕ್ಕೆಂದು ಗೋಕರ್ಣಕ್ಕೆ ಹೋಗಿದ್ದರು. 15ರಂದು ಮನೆಗೆ ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಹಾಗೂ 1.50 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದರು.

READ | ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ, ಬಂಧಿತರ ಹೆಸರು ರಿಲೀಸ್

ನೀಡಲಾದ ದೂರಿನನ್ವಯ ಐಪಿಸಿ ಕಲಂ 454, 457, 380 ರೀತ್ಯಾ ಪ್ರಕರಣ ದಾಖಲಿಸಿಕೊಂಡು ಜಯನಗರ ಪೊಲೀಸ್ ಠಾಣೆ ಪಿಐ, ಪಿಎಎಸ್‍ಐ ಹಾಗೂ ಸಿಬ್ಬಂದಿಯ ತಂಡವು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ.

https://www.suddikanaja.com/2021/11/26/five-persons-have-been-arrested-on-friday-for-allegedly-stealing-jewellery-from-a-house-in-the-village-of-thirthahalli/

error: Content is protected !!