TODAY GOLD, SILVER RATE ಚಿನ್ನ, ಬೆಳ್ಳಿಯ ಬೆಲೆ ಮತ್ತೆ ಏರಿಕೆ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದೆ. ಗುರುವಾರವಷ್ಟೇ ಇಳಿಕೆಯಾಗಿದ್ದ ಬೆಲೆಯು ಶುಕ್ರವಾರ ಸ್ಥಿರವಾಗಿತ್ತು. ಆದರೆ, ಶನಿವಾರ ಪ್ರತಿ 10 ಗ್ರಾಂ ಅಪರಂಜಿಯ ಮೇಲೆ 220 ರೂಪಾಯಿ ಹೆಚ್ಚಳವಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಅಡ್ಡಪರಿಣಾಮ ಚಿನ್ನದ ಬೆಲೆಯ ಮೇಲೆಯೂ ಬೀರಿತ್ತು. ಹಾಗಾಗಿ, ದರದಲ್ಲಿ ಏಕಾಏಕಿ ಏರಿಕೆಯಾಗಿತ್ತು. ಇದರ ನಡುವೆಯೇ ಮಾರ್ಚ್ 10ರಂದು 1,750 ರೂಪಾಯಿ ಇಳಿಕೆಯಾಗಿತ್ತು. ಇದು ಚಿನ್ನಾಭರಣ ಪ್ರಿಯರಲ್ಲಿ ಖುಷಿಗೆ ಕಾರಣವಾಗಿತ್ತು.

READ | ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರ, ಬೆಳ್ಳಿ ಮತ್ತೆ ಅಗ್ಗ

ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗಿದೆ. ಮಾರ್ಚ್ 11ರಂದು 500 ರೂ. ಹಾಗೂ 12ರಂದು 100 ರೂ. ಏರಿಕೆಯಾಗಿದೆ. ಪ್ರತಿ ದಿನ ಬೆಲೆ ಏರಿಕೆಯಾಗುತ್ತಿರುವುದು ಅಂಕಿ ಅಂಶಗಳಿಂದ ಕಂಡುಬಂದಿದೆ.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ(ಕೆಜಿ)
ಮಾರ್ಚ್ 4 47,700 52,040 72,500
ಮಾರ್ಚ್ 5 48,400 52,800 73,400
ಮಾರ್ಚ್ 6 48,400 52,800 73,400
ಮಾರ್ಚ್ 7 49,400 53,890 75,700
ಮಾರ್ಚ್ 8 49,400 53,890 74,600
ಮಾರ್ಚ್ 9 50,700 55,310 75,700
ಮಾರ್ಚ್ 10 48,200 52,580 74,100
ಮಾರ್ಚ್ 11 48,200 52,580 74,600
ಮಾರ್ಚ್ 12 48,400 52,800 74,700

https://www.suddikanaja.com/2022/03/09/today-gold-rate-hike-on-march-9-and-created-record-in-a-market-trends/

error: Content is protected !!