ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದೆ. ಗುರುವಾರವಷ್ಟೇ ಇಳಿಕೆಯಾಗಿದ್ದ ಬೆಲೆಯು ಶುಕ್ರವಾರ ಸ್ಥಿರವಾಗಿತ್ತು. ಆದರೆ, ಶನಿವಾರ ಪ್ರತಿ 10 ಗ್ರಾಂ ಅಪರಂಜಿಯ ಮೇಲೆ 220 ರೂಪಾಯಿ ಹೆಚ್ಚಳವಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಅಡ್ಡಪರಿಣಾಮ ಚಿನ್ನದ ಬೆಲೆಯ ಮೇಲೆಯೂ ಬೀರಿತ್ತು. ಹಾಗಾಗಿ, ದರದಲ್ಲಿ ಏಕಾಏಕಿ ಏರಿಕೆಯಾಗಿತ್ತು. ಇದರ ನಡುವೆಯೇ ಮಾರ್ಚ್ 10ರಂದು 1,750 ರೂಪಾಯಿ ಇಳಿಕೆಯಾಗಿತ್ತು. ಇದು ಚಿನ್ನಾಭರಣ ಪ್ರಿಯರಲ್ಲಿ ಖುಷಿಗೆ ಕಾರಣವಾಗಿತ್ತು.
READ | ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರ, ಬೆಳ್ಳಿ ಮತ್ತೆ ಅಗ್ಗ
ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗಿದೆ. ಮಾರ್ಚ್ 11ರಂದು 500 ರೂ. ಹಾಗೂ 12ರಂದು 100 ರೂ. ಏರಿಕೆಯಾಗಿದೆ. ಪ್ರತಿ ದಿನ ಬೆಲೆ ಏರಿಕೆಯಾಗುತ್ತಿರುವುದು ಅಂಕಿ ಅಂಶಗಳಿಂದ ಕಂಡುಬಂದಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
https://www.suddikanaja.com/2022/03/09/today-gold-rate-hike-on-march-9-and-created-record-in-a-market-trends/