ಲೋಕಲ್ ಫೈಟ್ ವೇಳಾಪಟ್ಟಿ ಪ್ರಕಟ, ಮತದಾರರ ಸಂಖ್ಯೆ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಅದಕ್ಕಾಗಿ, ಚುನಾವಣ ಆಯೋಗ ಸೋಮವಾರ ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯದ 5762 ಗ್ರಾಮ ಪಂಚಾಯಿತಿಗಳ 35884 ಕ್ಷೇತ್ರಗಳಿಂದ 92121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 6004 ಪಂಚಾಯಿತಿಗಳಿವೆ. ಆದರೆ, ಅದರಲ್ಲಿ 162ಕ್ಕೆ ಇನ್ನೂ ಅವಧಿ ಮುಕ್ತಾಯವಾಗಿಲ್ಲ. ನ್ಯಾಯಾಲಯದಲ್ಲಿ ಆರು ಗ್ರಾಪಂಗಳ ಪ್ರಕರಣವಿದೆ. 33 ಗ್ರಾಪಂಗಳು ಪೂರ್ಣವಾಗಿ ಹಾಗೂ 41 ಭಾಗಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿವೆ. ಒಟ್ಟಾರೆ 242 ಪಂಚಾಯಿತಿ ಹೊರತುಪಡಿಸಿ ಇನ್ನುಳಿದವುಗಳಿಗೆ ಅಖಾಡ ಸಿದ್ಧವಾಗಿದೆ.
ಮೊದಲನೇ ಹಂತದಲ್ಲಿ 2930 ಹಾಗೂ ಎರಡನೇ ಹಂತದಲ್ಲಿ 2832 ಪಂಚಾಯಿತಿಗಳಲ್ಲಿ ಚುನಾವಣೆ ರಂಗೇರಲಿದೆ.
ವೇಳಾಪಟ್ಟಿ
* ಜಿಲ್ಲಾಧಿಕಾರಿಗಳು ಚುನಾವಣ ಅಧಿಸೂಚನೆ ಹೊರಡಿಸುವ ದಿನಾಂಕ: 7-12-2020 (ಮೊದಲ ಹಂತ), 11-12-20 (2ನೇ ಹಂತ)
* ನಾಮಪತ್ರ ಸಲ್ಲಿಸಲು ಕೊನೆಯ ದಿನ: 11-12-20 ಹಾಗೂ 16-12-20
* ನಾಮಪತ್ರ ಪರಿಶೀಲನೆ ದಿನಾಂಕ: 12-12-20 ಹಾಗೂ 17-12-20
* ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ- 14-12-20 ಹಾಗೂ 19-12-20
* ಅಗತ್ಯವಿದ್ದರೆ ಮತದಾನ ನಡೆಸುವ ದಿನಾಂಕ (ಬೆಳಗ್ಗೆ 7ರಿಂದ ಸಂಜೆ 5): 22-12-20 ಹಾಗೂ 27-12-20
* ಮರು ಮತದಾನವಿದ್ದಲ್ಲಿ ದಿನಾಂಕ (ಬೆಳಗ್ಗೆ 7ರಿಂದ ಸಂಜೆ 5): 24-12-20 ಹಾಗೂ 29-12-20
* ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ದಿನಾಂಕ (ಬೆಳಗ್ಗೆ 8ರಿಂದ): 30-12-20
* ಚುನಾವಣೆ ಮುಕ್ತಾಯಗೊಳಿಸುವ ದಿನಾಂಕ: 31-12-20

ಚುನಾವಣ ನಿಯಮಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.suddikanaja.com/2020/11/25/election-commission-announced-grama-karnataka-panchayat-election/

Leave a Reply

Your email address will not be published. Required fields are marked *

error: Content is protected !!