ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣ ಆಯೋಗ ಸೂಚನೆ ನೀಡಿದ ಬೆನ್ನಲ್ಲೇ ದಿನಾಂಕವನ್ನು ಪ್ರಕಟಿಸಿದೆ. ಅದರನ್ವಯ, ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಮೊದಲ ಹಂತದಲ್ಲಿ ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯಿತಿ, ಭದ್ರಾವತಿಯ 35, ತೀರ್ಥಹಳ್ಳಿಯ 38 ಹಾಗೂ ಎರಡನೇ ಹಂತದಲ್ಲಿ ಸಾಗರದ 35, ಶಿಕಾರಿಪುರದ 39, ಸೊರಬ 37 ಮತ್ತು ಹೊಸನಗರದ 30 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
1411 ಮತಗಟ್ಟೆ: ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯ 144 ಆಕ್ಸಿಲರಿ ಮತ್ತು 1267 ಮೂಲ ಮತಗಟ್ಟೆ ಸೇರಿ ಒಟ್ಟು 1411 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.
435982 ಪುರುಷರು ಮತ್ತು 449200 ಮಹಿಳಾ ಮತದಾರರು ಸೇರಿ ಒಟ್ಟು 885182 ಮತಗಟ್ಟೆಗಳಿವೆ.
ಇಂದಿನಿಂದಲೇ ನೀತಿ ಸಂಹಿತೆ: ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 30ರಿಂದ ಡಿಸೆಂಬರ್ 31ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.
ಚುನಾವಣ ವೇಳಾಪಟ್ಟಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.suddikanaja.com/2020/11/30/grama-panchayat-election-date-declare-in-karnataka/