ಕುಮದ್ವತಿ ನದಿ ನೀರಿಗೆ ವಿಷ ಬೆರೆಸಿದ ದುಷ್ಕರ್ಮಿಗಳು, ಜಲಚರಗಳ‌ ಮಾರಣಹೋಮ

 

 

ಸುದ್ದಿ ಕಣಜ.ಕಾಂ‌ | TALUK | FISH DEATH
ಹೊಸನಗರ: ತಾಲೂಕಿನ ರಿಪ್ಪನಪೇಟೆಯ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ದುಷ್ಕರ್ಮಿಗಳು ಕುಮದ್ವತಿ ನದಿ ನೀರಿಗೆ ವಿಷ ಸೇರಿಸಿದ್ದು, ಜಲಚರಗಳ ಮಾರಣಹೋಮವಾಗಿದೆ.
ಬೇಸಿಗೆಯಿಂದಾಗಿ‌ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ.‌ ಹೀಗಾಗಿ, ಹೊಂಡದಲ್ಲಿ‌ ನೀರು ಶೇಖರಣೆ ಆಗಿದೆ, ಅದಕ್ಕೆ‌ ಕಿಡಿಗೇಡಿಗಳು ವಿಷ ಮಿಶ್ರಣ ಮಾಡಿದ್ದು, ಜಲಚರಗಳು ಮೃತಪಟ್ಟಿವೆ.

READ | ಕುವೆಂಪು ವಿಶ್ವವಿದ್ಯಾಲಯಕ್ಕೆ‌ ನುಗ್ಗಿದ ಕಾಡಾನೆಗಳು ವಾಪಸ್

ಬೇಸಿಗೆಯಲ್ಲಿ ನೀರು ಹರಿಯದೇ ಇರುವುದರಿಂದ ಹಳ್ಳ,‌ಹೊಂಡಗಳಲ್ಲಿ ಮೀನುಗಳ ಹುದುಗಿರುತ್ತವೆ. ಅವುಗಳನ್ನು ಹಿಡಿಯುವುದಕ್ಕಾಗಿ ಅಂಟುವಾಳು ಕಾಯಿ ರಸ, ಕಾರೆ ಕಾಯಿ ರಸ, ಮೈಲುತುತ್ತಾ ಮತ್ತಿತರ ಪದಾರ್ಥಗಳನ್ನು ಹಾಕಲಾಗುತ್ತದೆ. ಆಗ ಮೀನುಗಳು ಅಸ್ವಸ್ಥ ಸ್ಥಿತಿಯಲ್ಲಿ ನೀರಿನ ಮೇಲೆ‌ ತೇಲಾಡುತ್ತವೆ. ಸುಲಭವಾಗಿ ಮೀನುಗಳನ್ನು ಹಿಡಿಯಬಹುದು. ಕಿಡಿಗೇಡಿಗಳ ಕೃತ್ಯಕ್ಕೆ ಜಲಚರಗಳು ಮೃತಪಟ್ಟಿವೆ.

error: Content is protected !!