ಶಿವಮೊಗ್ಗದಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ಏರಿಕೆ, ಇಂದಿನ ದರವೆಷ್ಟು?

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಶಿವಮೊಗ್ಗ: ಪೆಟ್ರೋಲ್ ದರ ಬುಧವಾರ ಪ್ರತಿ ಲೀಟರಿಗೆ 1.38 ಪೈಸೆ ಏರಿಕೆಯಾಗಿದ್ದು, ಇಂದಿನ ಬೆಲೆಯು 112.56 ಇದೆ.
ಫೆಬ್ರವರಿ ಮೊದಲನೇ ವಾರದಲ್ಲಿ 102.10 ರೂಪಾಯಿಯಷ್ಟಿದ್ದ ಪೆಟ್ರೋಲ್ ದರವು ಏಪ್ರಿಲ್ ನಲ್ಲಿ ದಾಖಲೆ ಸೃಷ್ಟಿಸಿದೆ. ಇದು ಈ ವರ್ಷದಲ್ಲಿಯೇ ಅತ್ಯಧಿಕ ಬೆಲೆಯಾಗಿದೆ. ನಿನ್ನೆಗಿಂತ ಬೆಲೆಯು ಅಧಿಕವಾಗಿದೆ.

READ | ಈ ವರ್ಷ ಹೊಸ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ರೇಟ್, ಶಿವಮೊಗ್ಗದಲ್ಲಿ ಇಂದಿನ ದರವೆಷ್ಟು?

ತಿಂಗಳುವಾರು ಅತ್ಯಧಿಕ ಬೆಲೆಗಳ ವಿವರ
ಜನವರಿ ಮತ್ತು ಫೆಬ್ರವರಿಯಲ್ಲಿ 102.45 ರೂಪಾಯಿ, ಮಾರ್ಚ್ ನಲ್ಲಿ 109.11 ರೂ. ಅತ್ಯಧಿಕ ಬೆಲೆ ಇತ್ತು. ಆದರೆ, ಈ ಎಲ್ಲ ದಾಖಲೆಗಳನ್ನು ಏಪ್ರಿಲ್ ಹಿಂದಿಕ್ಕಿದೆ. ಏಪ್ರಿಲ್ ಮೊದಲನೇ ವಾರದಲ್ಲಿಯೇ 111ರ ಗಡಿ ದಾಟಿರುವ ಪೆಟ್ರೋಲ್ ಗ್ರಾಹಕರ ಜೇಬು ಸುಡುತ್ತಿದೆ. ಈ ತಿಂಗಳಲ್ಲಿ +ಶೇ.2.67ರಷ್ಟು ಬೆಲೆ ಏರಿಕೆ ಪ್ರಮಾಣ ಇದೆ.

ಇಂದಿನ ಪೆಟ್ರೋಲ್ ದರ 112.56 ಇಂದಿನ ಡಿಸೇಲ್ ದರ 96.04

ಡಿಸೇಲ್ ಬೆಲೆಯಲ್ಲೂ ಏರಿಕೆ
ಜನವರಿ ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ಗರಿಷ್ಠ 86.62 ರೂ. ಇತ್ತು. ಫೆಬ್ರವರಿಯಲ್ಲಿ ಗರಿಷ್ಠ ದರವು 86.62 ರೂ., ಹಾಗೂ ಮಾರ್ಚ್ ನಲ್ಲಿ 92.82 ರೂ. ಅತ್ಯಧಿಕ ಬೆಲೆ ದಾಖಲಾಗಿತ್ತು. ಆದರೆ, ಏಪ್ರಿಲ್ ತಿಂಗಳಲ್ಲಿ ಲೀಟರ್ ಗೆ ಗರಿಷ್ಠ 96.04 ರೂ. ನಿಗದಿಯಾಗಿದ್ದು, ಇದೂ ಸಹ ಈ ವರ್ಷದ ದಾಖಲೆಯಾಗಿದೆ. ಏಪ್ರಿಲ್ 1ರಿಂದ 6ರ ವರೆಗೆ ಪೆಟ್ರೋಲ್ ಮತ್ತು ಡಿಸೇಲ್ ದರ ಯಾವ ರೀತಿಯಲ್ಲಿ ಏರಿಕೆ ಕಂಡಿದೆ ಎನ್ನುವ ಮಾಹಿತಿ ಕೆಳಗಿದೆ.

ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ
ದಿನಾಂಕ ಪೆಟ್ರೋಲ್ ಡಿಸೇಲ್
ಮಾರ್ಚ್ 31 1.86 1.7
ಏಪ್ರಿಲ್ 01 -1.01 -0.92
ಏಪ್ರಿಲ್ 02 1.72 1.57
ಏಪ್ರಿಲ್ 03 0.63 0.61
ಏಪ್ರಿಲ್ 04 0.18 0.21
ಏಪ್ರಿಲ್ 05 0.44 0.37
ಏಪ್ರಿಲ್ 06 1.49 1.38

READ | 8ನೇ ತರಗತಿ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಸ್ವಯಂ ಉದ್ಯೋಗ ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

error: Content is protected !!