ಸುದ್ದಿ ಕಣಜ.ಕಾಂ | DISTRICT | MESCOM
ಶಿವಮೊಗ್ಗ: ತಾಲೂಕು ಗ್ರಾಮೀಣ ಉಪ ವಿಭಾಗ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಅಬ್ಬಲಗೆರೆ, ಪಿಳ್ಳಂಗೆರೆ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು ಶಾಖಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರುವ ರೈತರು ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ ಯೋಜನೆಯಡಿ ಕೃಷಿ ಪಂಪ್ ಸೆಟ್ ವಿದ್ಯುತ್ ಸೌಲಭ್ಯ ಪಡೆಯಲು ಆರ್ಜಿ ಆಹ್ವಾನಿಸಲಾಗಿದೆ.
READ | ಮೌಖಿಕ ಆದೇಶದ ಮೇಲೆ ಯಾವುದೇ ಕಾಮಗಾರಿ ಮಾಡುವಂತಿಲ್ಲ, ನಿಯಮ ಮೀರಿದ್ರೆ ಅಧಿಕಾರಿಗಳಿಗೆ ಕಂಟಕ, ಬೊಮ್ಮಾಯಿ ಸೂಚನೆ
ಆಸಕ್ತರು ಮೆಸ್ಕಾ ಕಚೇರಿಯಿಂದ ನಿಗದಿತ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಏಪ್ರಿಲ್ 30ರೊಳಗಾಗಿ ಸಲ್ಲಿಸುವಂತೆ ಗ್ರಾಮೀಣ ಉಪ ವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಎಚ್.ಪಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.