ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿ ಮಹಿಳೆ, ಹೇಗಿದೆ ಮಕ್ಕಳ ಸ್ಥಿತಿ?

Children

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾಜ್ ಬಾನು (22) ಅವರು ನಗರದ ಸರ್ಜಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನನ ನೀಡಿದ್ದಾರೆ.
ಹೆರಿಯಾದ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ. ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ವಿರಳ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ. 5.12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ.

READ | ಫ್ರೀಡಂ ಪಾರ್ಕ್‍ನಲ್ಲಿ ರಾಶಿ ರಾಶಿ ಮದ್ಯದ ಬಾಟಲಿ!

ಆನುವಂಶೀಯ ಕಾರಣಗಳು
ಅವಳಿ-ಜವಳಿ ಮತ್ತು ನಾಲ್ಕು ಮಕ್ಕಳಾಗುವುದಕ್ಕೆ ಆನುವಂಶೀಯ ಅಂಶಗಳೇ ಕಾರಣ ಎಂದು ಹೆರಿಗೆ ಮಾಡಿಸಿದ ಸರ್ಜಿ ಆಸ್ಪತ್ರೆಯ ಹಿರಿಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಎನ್.ಚೇತನಾ ಹೇಳುತ್ತಾರೆ.
‘ಈ ರೀತಿಯ ಹೆರಿಗೆ ಮಾಡಿಸುವುದು ತುಂಬ ಸವಾಲಿನ ಸಂದರ್ಭವಾಗಿದ್ದು, ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ತುಂಬಾ ರಕ್ತಸ್ರಾವವಾಗುವ ಸಂಭವವಿರುತ್ತದೆ. ಇಂತಹ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಡಾ.ಮೂರ್ಕಣ್ಣಪ್ಪ ಅವರ ಸಹಕಾರ ತುಂಬ ಸಹಾಯವಾಯಿತು. ಸಹಕಾರ ನೀಡಿದ ಮಕ್ಕಳ ತಜ್ಞ ವೈದ್ಯರಿಗೆ ಹಾಗೂ ಓ.ಟಿ. ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ನಮ್ಮ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ತುಂಬ ಸಂತೋಷದ ವಿಷಯ ಹಾಗೂ ಎಲ್ಲ ಶಿಶುಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆ ಶಿಶುಗಳಿಗೆ ನಮ್ಮ ಆಸ್ಪತ್ರೆಯ ವತಿಯಿಂದ ಅತಿ ಕಡಿಮೆ ದರದಲ್ಲಿ ಇವರಿಗೆ ಚಿಕಿತ್ಸೆಯನ್ನು ಒದಗಿಸಿಕೊಡುತ್ತೇವೆ.
ಡಾ.ಧನಂಜಯ್ ಸರ್ಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು

ಮಕ್ಕಳ ತೂಕವೆಷ್ಟಿದೆ?
ಸರ್ಜಿ ಆಸ್ಪತ್ರೆಯ ನವಜಾತ ಶಿಶುಗಳ ಮತ್ತು ಮಕ್ಕಳ ತಜ್ಞ ಡಾ.ಅನಿಲ್ ಬಿ.ಕಲ್ಲೇಶ್ ಮಾತನಾಡಿ, ನಾಲ್ಕೂ ಮಕ್ಕಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಾಲ್ಕೂ ಶಿಶುಗಳು 1.1 ಕೆಜಿ, 1.2 ಕೆಜಿ, 1.3 ಕೆಜಿ ಮತ್ತು 1.8 ಕೆಜಿ ತೂಕ ಹೊಂದಿವೆ. ನಾಲ್ಕೂ ಮಕ್ಕಳಿಗೆ ಅಲ್ಪ ಪ್ರಮಾಣದ ಉಸಿರಾಟದ ತೊಂದರೆಯಿದ್ದು, ಎರಡು ಶಿಶುಗಳಿಗೆ ಸಿಪ್ಯಾಪ್ ಅನ್ನು ಅಳವಡಿಸಲಾಗಿದೆ. ಇನ್ನೂ ಶಿಶುಗಳಿಗೆ ಎರಡು ಶಿಶುಗಳಿಗೆ ಆಕ್ಸಿಜನ್ ಅನ್ನು ನೀಡಲಾಗಿದೆ. ಎಲ್ಲ ಶಿಶುಗಳಿಗೆ ತಾಯಿಯ ಎದೆಯ ಹಾಲನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಶಿಶುಗಳಿಗೆ ಕೆಎಂಸಿ (ಕಾಂಗರೂ ಮದರ್ ಕೇರ್)ಯನ್ನು ಸಹ ನೀಡಲಾಗುತ್ತಿದೆ. ಎಲ್ಲ ಶಿಶುಗಳು ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.

https://suddikanaja.com/2022/01/24/covid-is-the-third-wave-of-the-virus-so-it-does-not-have-much-impact-on-the-health-of-the-children-said-dr-dhananjaya-sarji/

Leave a Reply

Your email address will not be published. Required fields are marked *

error: Content is protected !!