ಶಿವಮೊಗ್ಗದಲ್ಲಿ ರೌಡಿ ಕಾಲಿಗೆ ಗುಂಡೇಟು

Harshad arrest

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಕಾಲಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಬುದ್ಧನಗರದ ಹರ್ಷದ್ ಅಲಿಯಾಸ್ ಜಾಮೂನ್ (30) ಎಂಬಾತನ ಮೇಲೆ ಗುಂಡು ಹಾರಿಸಲಾಗಿದೆ.
ಜೂನ್ 1ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಪ್ರಕರಣ ದಾಖಲಿಕೊಂಡು ತುಂಗಾನಗರ ಪಿಐ ಮಂಜುನಾಥ್ ಮತ್ತು ಸಿಬ್ಬಂದಿ ತಂಡವು ಪ್ರಕರಣದ ತನಿಖೆ ಕೈಗೊಂಡಿದೆ.
ಕಾರ್ಯಾಚರಣೆ ವೇಳೆ ಹರ್ಷದ್ ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿರುತ್ತಾರೆ. ನಂತರ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಇಂದು ವಿಶ್ವ ಸೈಕಲ್‌ ದಿನ‌,  ಸೈಕಲ್ ದಿನದ ವಿಶೇಷವೇನು? ಸೈಕಲ್‌ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

ಬೇಲ್ ಮೇಲೆ ಹೊರಗಡೆ ಬಂದಿದ್ದ ಹರ್ಷದ್
ಈತನ ಮೇಲೆ ಜಿಲ್ಲೆಯಲ್ಲಿ ಮಾರಣಾಂತಿಕ ಹಲ್ಲೆ, ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತವೆ. ಇವುಗಳಲ್ಲಿ ಕೋಟೆ ಪೊಲೀಸ್ ಠಾಣೆಯ ಮಾರಣಾಂತಿಕ ಹಲ್ಲೆ ಪ್ರಕರಣವೊಂದರಲ್ಲಿ 2017ರ ಜುಲೈ 10ರಂದು ನ್ಯಾಯಾಲಯವು ಆರೋಪಿತನಿಗೆ 10 ವರ್ಷಗಳ ಕಾಲ ಕಾರಾವಾಸ ಶಿಕ್ಷೆ ವಿಧಿಸಿರುತ್ತದೆ. ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದಿರುತ್ತಾನೆ. ಈ ಸಮಯದಲ್ಲೂ ಈತನು ಅಪರಾಧ ಕೃತ್ಯಗಳನ್ನು ಮಾಡುತ್ತಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

https://suddikanaja.com/2020/11/12/rowdy-murder-case-two-person-arrested-in-shivamogga/

Leave a Reply

Your email address will not be published. Required fields are marked *

error: Content is protected !!