ಹಳೆಯ ಶಿವಮೊಗ್ಗದಲ್ಲಿ ನಾಳೆ ಮೂರು ಗಂಟೆಯಷ್ಟೇ ಕರ್ಫ್ಯೂ ಸಡಿಲಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಳೆಯ ಶಿವಮೊಗ್ಗದಲ್ಲಿ ಡಿಸೆಂಬರ್ 3ರಂದು ನಡೆದ ಕೋಮು ಗಲಭೆ ಬಳಿಕ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಿದೆ. ಅದಕ್ಕಾಗಿ, ಯಾವುದೇ ಅಹಿತಕರ ಘಟನೆಗಳು ಮರುಕಳುಹಿಸಬಾರದೆಂಬ ಉದ್ದೇಶದಿಂದ ನಿಷೇಧಾಜ್ಞೆ, ಕರ್ಫ್ಯೂ ಮುಂದುವರಿಸಲಾಗಿದೆ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಲಾಗಿದೆ.

ಮತ್ತೆ ನಿಷೇಧಾಜ್ಞೆ ಮುಂದುವರಿಕೆ, ಎಲ್ಲಿಯವರೆಗೆ ಇರಲಿದೆ 144?

ಯಾವಾಗ: ತುಂಗಾನಗರ, ಕೋಟೆ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಡಿಸೆಂಬರ್ 8ರಂದು ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮಾತ್ರ ಸಾರ್ವಜನಿಕರು ಹೊರಗಡೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಎಸ್.ಪಿ. ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಪೊಲೀಸರು, ವ್ಯಾಪಾರಸ್ಥರ ಮಧ್ಯೆ ಚಟಾಪಟಿ

error: Content is protected !!