ಜಗತ್ತು ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಶಿಶು, ಹೆತ್ತವರೂ ಸಾವು

shivamogga Rural police station

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ತಾಲೂಕಿನ ಬೇಡರಹೊಸಳ್ಳಿ ಸಮೀಪ ಕಾರು ಮತ್ತು ಓಮ್ನಿ ವ್ಯಾನ್ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, ಪತಿ, ಪತ್ನಿ ಮತ್ತು ಜಗತ್ತನ್ನೇ ಕಾಣದ ಶಿಶು ಮೃತಪಟ್ಟಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಧನಂಜಯ್(35), ಆತನ ಪತ್ನಿ ರೋಜಾ(27) ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಧನಂಜಯ್ ಅವರಿಗೆ ಒಂದು ವರ್ಷದ ಹಿಂದೆ ರೋಜಾ ಅವರೊಂದಿಗೆ ವಿವಾಹವಾಗಿತ್ತು. ರೋಜಾ ಅವರು 9 ತಿಂಗಳ ಗರ್ಭಿಣಿಯಾಗಿದ್ದರು. ಇವರೊಂದಿಗೆ ಧನಂಜಯ್ ಅವರ ಅತ್ತಿಗೆ ಸುನೀತಾ, ತಾಯಿ ಇಂದ್ರಮ್ಮ ಅವರೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗಾಗಿ ಕರೆದುಕೊಂಡು ಬರಲಾಗಿತ್ತು. ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ.

READ | ಪುತ್ರನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ನ್ಯಾಯ ಒದಗಿಸಿದ ಲೋಕ್ ಅದಾಲತ್

ಸಿಜೇರಿಯನ್ ಮಾಡಿದರೂ ಬದುಕದ ಶಿಶು
ರೋಜಾ ಅವರು ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರಿಗೆ ಚಿಕಿತ್ಸೆ ನೀಡುವುದಲ್ಲದೇ ಸಿಜೇರಿಯನ್ ಮೂಲಕ ಮಗುವನ್ನು ಬದುಕಿಸಲು ಪ್ರಯತ್ನಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ರೋಜಾ ಅವರು ಮೃತಪಟ್ಟಿದ್ದಾರೆ. ಏಳು ತಿಂಗಳ ಗರ್ಭಿಣಿ ಸುನೀತಾ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರಮ್ಮ ಮತ್ತು ಚೇತನ್ ಅವರಿಗೆ ಗಾಯಗಳಿವೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2021/05/11/wrestler-srinivas-died-due-to-corona/

Leave a Reply

Your email address will not be published. Required fields are marked *

error: Content is protected !!