ಅಜ್ಜಿಯ ಬಾಯಲ್ಲಿ ಬಟ್ಟೆ ತುರುಕಿ‌ ದರೋಡೆ ಮಾಡಿದವರು‌ ಅರೆಸ್ಟ್, ಪಕ್ಕದ ಮನೆಯವರಿಂದಲೇ‌ ಸ್ಕೆಚ್

Jaya nagar police station

 

 

ಸುದ್ದಿ‌ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವೆಂಕಟೇಶನಗರದಲ್ಲಿ 63 ವರ್ಷದ ಅಜ್ಜಿಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ‌ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.
ಹೊಸಮನೆಯ ಬಿ.ರಾಹುಲ್‌(20), ವೆಂಕಟೇಶನಗರದ ಪಿ.ಚಂದನ್‌ (15) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಪ್ರೇಮಾ ಅವರ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೃತ್ಯ ಎಸಗಿದ್ದರು.
ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 19 ಸಾವಿರ ರೂ. ನಗದು, 7700 ರೂ. ಮೊತ್ತದ ಮೊಬೈಲ್‌ ಫೋನ್‌, ಬೆಳ್ಳಿಯ ಮಂಗಳ ಗೌರಿ ಮೂರ್ತಿ ಕಳ್ಳತನ ಮಾಡಲಾಗಿದೆ.
ಆರೋಪಿಗಳಲ್ಲಿ ಒಬ್ಬ ಅಜ್ಜಿಯ ಮನೆಯ ಪಕ್ಕದವನೇ ಆಗಿದ್ದು, ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿಯೇ ಮನೆಯಲ್ಲಿ ದರೋಡೆ ಮಾಡುವುದಕ್ಕೆ ಸ್ಕೆಚ್ ಮಾಡಲಾಗಿದೆ.

READ | ತ್ಯಾವರೆಕೊಪ್ಪ ಸಿಂಹ ಧಾಮದಲ್ಲಿ ‘ಯಶವಂತ್’ ಸಾವು, ಈ ಸಿಂಹದ ಬಗ್ಗೆ ತಿಳಿಯಬೇಕಾದ ವಿಷಯಗಳಿವು

Leave a Reply

Your email address will not be published. Required fields are marked *

error: Content is protected !!