ತ್ಯಾವರೆಕೊಪ್ಪ ಸಿಂಹ ಧಾಮದಲ್ಲಿ ‘ಯಶವಂತ್’ ಸಾವು, ಈ ಸಿಂಹದ ಬಗ್ಗೆ ತಿಳಿಯಬೇಕಾದ ವಿಷಯಗಳಿವು

 

ಸುದ್ದಿ ಕಣಜ.ಕಾಂ | DISTRICT | SHIVAMOGGA ZOO
ಶಿವಮೊಗ್ಗ: ತ್ಯಾವರೆಕೊಪ್ಪ (Tyavarekoppa) ಹುಲಿ ಮತ್ತು ಸಿಂಹ ಧಾಮ(Tiger and Lion safari) ದಲ್ಲಿ ಯಶವಂತ್(11) ಹೆಸರಿನ ಸಿಂಹ(Lion)ವೊಂದು ಶುಕ್ರವಾರ ಮೃತಪಟ್ಟಿದೆ.
ಯಶವಂತ್ ಅನಾರೋಗ್ಯದಿಂದ ಮೃತಪಟ್ಟಿದ್ದು, ಇತ್ತೀಚೆಗೆ ಬನ್ನೇರುಘಟ್ಟ(Bannerughatta)ದಿಂದ ಇದನ್ನು ತರಲಾಗಿತ್ತು. ಈ ಸಿಂಹದ ಪ್ಲೇಟ್ಲೇಟ್ ಕೌಂಟ್ಸ್  (platelet count) 50,000ಕ್ಕಿಂತ ಕಡಿಮೆಯಾಗಿದ್ದರಿಂದ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

READ | ನಿಮ್ಮ ಕಾರ್ಯಕ್ರಮಗಳಿಗೆ ನಟಿ ಸನ್ನಿ ಲಿಯೋನ್ ಗೆಸ್ಟ್ ಆಗಿ ಬರಬೇಕೆ? ಇವರಿಗೆ ಸಂಪರ್ಕಿಸಿ

  • ಯಶವಂತನ ಬಗ್ಗೆ ತಿಳಿಯಬೇಕಾದ ವಿಷಯಗಳಿವು
  • ಯಶವಂತ ಇತ್ತೀಚೆಗೆ ಆಕ್ರಮಣಕಾರಿ ಸ್ವಭಾವದ್ದಾಗಿದ್ದು, ಈ ಹಿಂದೆಯೂ ಬನ್ನೇರುಘಟ್ಟದಲ್ಲಿ ಸಿಂಹಿಣಿಗಳ ಮೇಲೆ ದಾಳಿ ಮಾಡಿತ್ತಂತೆ.
  • ತ್ಯಾವರೆಕೊಪ್ಪದಲ್ಲಿ ಸಿಂಹಿಣಿಯೊಂದಿಗೆ ಬಿಟ್ಟಾಗ ಅದರ ಮೇಲೆಯೂ ಆಕ್ರಮಣ ಮಾಡಿತ್ತು. ಪರಿಣಾಮ ಅದು ಮೃತಪಟ್ಟಿತ್ತು.
  • ಯಶವಂತನ ಮೂಲಕ ತ್ಯಾವರೆಕೊಪ್ಪದಲ್ಲಿ ಸಿಂಹಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಲಾಗುತಿತ್ತು.

Leave a Reply

Your email address will not be published.