Arrest | ಮನೆಗೆ ಕನ್ನ ಹಾಕಿದ ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಆಭರಣಗಳು ಸೀಜ್

SAGAR Taluk

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಮನೆಯ ಬೀಗ ಒಡೆದು ಒಡವೆ ನಗದು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಸಾಗರ ಪಟ್ಟಣದ ಶ್ರೀಧರ್ ನಗರ ನಿವಾಸಿ ಶಿವರಾಜ್(23),‌ ಸಾಗರ ತಾಲೂಕು ಸೂರನಗದ್ದೆ ಗ್ರಾಮದ ದೊರೆರಾಜ(22) ಬಂಧಿತ‌ ಆರೋಪಿಗಳು. ಇವರ ಬಳಿಯಿಂದ ₹3,30,000 ಮೌಲ್ಯದ 74 ಗ್ರಾಂ ತೂಕದ ಬಂಗಾರದ ಆಭರಣಗಳು, ₹8,000 ಮೌಲ್ಯದ 200 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಮತ್ತು ₹4,000 ನಗದು ವಶಕ್ಕೆ ಪಡೆಯಲಾಗಿದೆ.

READ | ಭದ್ರಾವತಿಯಲ್ಲಿ ರೆಡ್ ಅಲರ್ಟ್, ಮುಳುಗಡೆಯ ಭೀತಿ

ಪ್ರಕರಣದ ಹಿನ್ನೆಲೆ
ಜುಲೈ 14ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಧರ ನಗರದ ವಾಸಿಯೊಬ್ಬರ ಮನೆಯ ಬೀಗವನ್ನು ಒಡೆದು ಬೆಳ್ಳಿ ಮತ್ತು ಬಂಗಾರದ ಒಡವೆಗಳು ಹಾಗೂ ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಾಗರ ಟೌನ್ ಪೊಲೀಸ್ ಠಾಣೆಯ ಪಿಐ, ಪಿಎಸ್ಐ,‌ ಕಾರ್ಗಲ್ ಸಿಪಿಐ, ಪಿಎಸ್ಐ ಹಾಗೂ ಸಿಬ್ಬಂದಿಯ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

https://suddikanaja.com/2020/12/01/man-from-west-bengal-theft-in-goldsmith-shop/

Leave a Reply

Your email address will not be published. Required fields are marked *

error: Content is protected !!