Veer Savarkar | ಸಾವರ್ಕರ್ ಫ್ಲೆಕ್ಸ್ ಹರಿದ‌‌ ಬೆನ್ನಲ್ಲೇ ನಡೆದ ಬೆಳವಣಿಗೆಗಳೇನು?

SAVARKAR

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಸೋಮವಾರ ಸಂಜೆ ವೀರ ಸಾವರ್ಕರ್ ಅವರ ಫ್ಲೆಕ್ಸ್ ಹರಿದ‌ ಬೆನ್ನಲ್ಲೇ ಚಾಕು ಇರಿತ ಸೇರಿದಂತೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ.

READ | ಭದ್ರಾವತಿಯಲ್ಲಿ ಯುವಕನ ಮೇಲೆ ಚಾಕು ಇರಿತ

ಸಂಜೆಯಿಂದ ಇದುವರೆಗಿನ‌ ಬೆಳವಣಿಗೆಗಳು

  • ಸೋಮವಾರ ಸಂಜೆ ಅಮೀರ್‌ ಅಹ್ಮದ್ ವೃತ್ತದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಹಾಕಿದ್ದ ಸಾವರ್ಕರ್ ಅವರ ಫ್ಲೆಕ್ಸ್ ತೆರವುಗೊಳಿಸಿದ ಕಿಡಿಗೇಡಿಗಳು
  • ಸ್ಥಳಕ್ಕೆ‌ ಧಾವಿಸಿದ ಎಸ್.ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಹಾಗೂ ಪೊಲೀಸರು ಸಿಬ್ಬಂದಿ.
  • ಎರಡು ಗುಂಪುಗಳ‌ ನಡೆಯಬಹುದಾಗಿದ್ದ ಅಹಿತರ ಘಟನೆಯನ್ನು ತಪ್ಪಿಸಿದ‌ ಪೊಲೀಸ್, ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದ ಖಾಕಿ.
  • ಹಿಂದೂಪರ‌ ಸಂಘಟನೆಯವರಿಂದ ಅಮೀರ್ ಅಹ್ಮದ್ ವೃತ್ತದಲ್ಲಿ ಪ್ರತಿಭಟನೆ
  • ಗಾಂಧಿ ಬಜಾರಿನ ತರಕಾರಿ ಮಾರ್ಕೆಟ್ ನಲ್ಲಿ ರಾಜಸ್ಥಾನ ಮೂಲದ ಅಶೋಕ ರಸ್ತೆ ಐದನೇ ಕ್ರಾಸ್ ನಿವಾಸಿ ಪ್ರೇಮ್‌ ಸಿಂಗ್ ಎಂಬುವವರಿಗೆ ಚಾಕು ಇರಿತ. ತಕ್ಷಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು
  • ಕಾನೂನು ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸೆಕ್ಷನ್ 144 ಹೇರಲಾಯಿತು. ಶಿವಮೊಗ್ಗದಲ್ಲಿ ಆಗಸ್ಟ್ 15ರ ಮಧ್ಯರಾತ್ರಿಯಿಂದ 18ರ ವರೆಗೆ ನಿಷೇಧಾಜ್ಞೆ ಜಾರಿ
  • ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
  • ಡಿಎಆರ್, ಆರ್.ಎ.ಎಫ್ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ
  • ಪ್ರೇಮ್ ಸಿಂಗ್ ಅವರಿಗೆ ಚಾಕು ಇರಿದ
  • ಜೆಸಿ ನಗರದ‌‌ ಎ‌ರಡನೇ ಕ್ರಾಸ್ ನಿವಾಸಿ ನದೀಮ್ (25), ಬುದ್ಧ ನಗರ ಎರಡನೇ ಕ್ರಾಸ್ ನಿವಾಸಿ ಅಬ್ದುಲ್ ರೆಹಮಾನ್ (25) ಎಂಬುವರಮವರ ಬಂಧನ
  • ಶಿವಮೊಗ್ಗಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಆಗಮನ, ಅಧಿಕಾರಿಗಳಿಂದ ಶಿವಮೊಗ್ಗ ಸ್ಥಿತಿಯ ಬಗ್ಗೆ ಪೂರ್ಣ ಮಾಹಿತಿ ಪಡೆದರು
  • ಮಂಗಳವಾರ ಬೆಳಗ್ಗೆ ಪ್ರೇಮ್ ಸಿಂಗ್ ಮೇಲೆ ಚಾಕು ಇರಿತ‌ ಪ್ರಕರಣ ಸಂಬಂಧ ಇನ್ನುಳಿದ ಆರೋಪಿ‌ ಮಾರ್ನಾಮಿ ಬೈಲು ನಿವಾಸಿ ಮೊಹಮ್ಮದ್‌ ಜಬೀ ಅಲಿಯಾಸ್ ಚರ್ಬಿ(30) ಬಂಧನಕ್ಕೆ‌ ಕಾರ್ಯಾಚರಣೆ ನಡೆಸಿದ ಪೊಲೀಸರ‌ ಮೇಲೆ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು‌ ಹೊಡೆದಿದ್ದಾರೆ.

https://suddikanaja.com/2021/06/19/flying-sikh-milkha-singh-passes-away/

Leave a Reply

Your email address will not be published. Required fields are marked *

error: Content is protected !!