Bhadravathi | ಸೊಂಟದ ಕೆಳಗಡೆಯೇ ಸಿಲುಕಿದ ಚುಚ್ಚಿದ ಚಾಕು, ಆಸ್ಪತ್ರೆಗೆ ಶಿಫ್ಟ್

xray knife

 

 

HIGHLIGHTS

  • ಹಳೇ ದ್ವೇಷದ ಹಿನ್ನೆಲೆಯಲ್ಲಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ
  • ಸೊಂಟದ ಕೆಳಭಾಗ ಚಾಕುವಿನಿಂದ ಚುಚ್ಚಿದ್ದರಿಂದ ಅಲ್ಲಿಯೇ ಸಿಲುಕಿದ ಚಾಕು

ಸುದ್ದಿ ಕಣಜ.ಕಾಂ | TALUK | 22 SEP 2022
ಭದ್ರಾವತಿ: ಹಳೇ ದ್ವೇಷದಿಂದ ಕೊಲೆ ಮಾಡುವ ಉದ್ದೇಶಕ್ಕಾಗಿ ಚಾಕುವಿನಿಂದ ವ್ಯಕ್ತಿಯೊಬ್ಬನಿಗೆ ಚುಚ್ಚಿದ್ದು, ಚಾಕು ಅಲ್ಲಿಯೇ ಸಿಲುಕಿಕೊಂಡ ಘಟನೆ ನಡೆದಿದೆ.
ಹೊಸಮನೆ ಅಶ್ವಥನಗರದ ಕಿರಣ್(31) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

READ | ಶಿವಮೊಗ್ಗ ಮೃಗಾಲಯದಲ್ಲಿ ಹಿರಿಯ ಹುಲಿ ಸಾವು, ಕಾರಣವೇನು?

ದೇವಸ್ಥಾನಕ್ಕೆ ಹೋಗಿ ಬರುವಾಗ ಹಲ್ಲೆ
ಅಂತರಗಂಗೆಯ ರಂಗನಾಥ ಸ್ವಾಮಿ ದೇವಸ್ಥಾನದ ಹತ್ತಿರ ಬರುವಾಗ ಅಂತರಗಂಗೆ ಗ್ರಾಮದ ಮನು ಮತ್ತು ಮಹೇಶ್ ಎಂಬುವವರು ಚಾಕುವಿನಿಂದ ಹೊಟ್ಟೆಗೆ ಚುಚ್ಚಲು ಮುಂದಾದಾಗ ತಡೆದಿದ್ದು, ಸೊಂಟದ ಕೆಳಭಾಗ ಚಾಕುವಿನಿಂದ ಚುಚ್ಚಿದ್ದರಿಂದ ಚಾಕು ಅಲ್ಲಿಯೇ ಸಿಕ್ಕಿಕೊಂಡಿದೆ. ತಕ್ಷಣ ಗಾಯಾಳುವನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/09/22/additional-coach-facility-for-four-trains-connecting-from-shimoga-to-different-parts-of-the-karnataka/

Leave a Reply

Your email address will not be published. Required fields are marked *

error: Content is protected !!