SIIMA Awards | ಮಲೆನಾಡಿನ ಪ್ರತಿಭೆಗೆ ಸೈಮಾ ಅವಾರ್ಡ್, ಇವರ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು

Sharanya shetty

 

 

HIGHLIGHTS

  • ಗಟ್ಟಿಮೇಳ ಖ್ಯಾತಿಯ ಮಲೆನಾಡಿನ ಪ್ರತಿಭೆ ಶರಣ್ಯ ಶೆಟ್ಟಿ ಅವರಿಗೆ ಸೈಮಾ ಅವಾರ್ಡ್
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
  • ಶರಣ್ಯ ಅವರ ಚೊಚ್ಚಲ ಚಿತ್ರ ‘1980’ಗೆ ಸಂದ ಪ್ರಶಸ್ತಿ, ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ

ಸುದ್ದಿ ಕಣಜ.ಕಾಂ | KARNATAKA | 24 SEP 2022
ಶಿವಮೊಗ್ಗ (shivamogga): ಮಲೆನಾಡಿನ ಪ್ರತಿಭೆ ಶರಣ್ಯ ಶೆಟ್ಟಿ (sharanya shetty ) ಅವರಿಗೆ 2022ನೇ ಸಾಲಿನ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್(ಸೈಮಾ-SIIMA ) ಕಾರ್ಯಕ್ರಮದಲ್ಲಿ ಶರಣ್ಯ ಶೆಟ್ಟಿ ಅವರಿಗೆ ಚೊಚ್ಚಲ ‘1980’ ಸಿನಿಮಾಕ್ಕೆ ಪ್ರಶಸ್ತಿ ನೀಡಲಾಗಿದೆ.

READ | ಅಪ್ಪಟ ಕನ್ನಡದ ಸೋಶಿಯಲ್ ಮೀಡಿಯಾ ವೇದಿಕೆಕೂ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

ಶರಣ್ಯ ಶೆಟ್ಟಿ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

  • ಶರಣ್ಯ ಶೆಟ್ಟಿ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿಯೇ ಆದರೂ ಶಿಕ್ಷಣ ಪಡೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಕಾಲೇಜು ದಿನಗಳಿಂದಲೇ ಅವರು ಮಾಡ್ಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾದರು.
  • ಮಿಸ್ ಇಂಡಿಯಾ (Miss India) 2018ರ ಫೈನಲ್ ವರೆಗೂ ಶರಣ್ಯ ಸ್ಪರ್ಧೆ ಮಾಡಿದರು. ಬಳಿಕ 2018ರ ಮಿಸ್ ಸೌತ್ ಇಂಡಿಯಾ (miss south india) ಕಿರೀಟ ಮುಡಿಗೇರಿಸಿಕೊಂಡರು. ಮಿಸ್ ಕ್ವೀನ್ ಆಫ್ ಇಂಡಿಯಾ (miss queen of india) ಫೈನಲಿಸ್ಟ್ ಕೂಡ ಆಗಿದ್ದರು.
  • ಶರಣ್ಯ ಓದಿದ್ದು ಎಂಜಿನಿಯರಿಂಗ್. ಡಾಕ್ಟರ್ ಇಲ್ಲವೇ ವೈದ್ಯರಾಗಬೇಕು ಎಂಬುವುದು ಪೋಷಕರ ಆಸೆಯಾಗಿತ್ತು. ಆದರೆ, ಶರಣ್ಯ ಆಯ್ಕೆ ಮಾಡಿದ್ದು ಮಾತ್ರ ಮಾಡ್ಲಿಂಗ್ ಕ್ಷೇತ್ರ
  • ಶರಣ್ಯ ಬರೀ ಸಿನಿಮಾ, ಧಾರವಾಹಿಗಳನ್ನು ಮಾತ್ರವಲ್ಲದೇ, ಆಲ್ಬಂ ಸಾಂಗ್(album song)ಗೂ ಬಣ್ಣ ಹಚ್ಚಿದ್ದಾರೆ. ಇವರು ‘ಫ್ರೆಂಡ್ ಝೋನ್ (friends zone) ಆಲ್ಬಂನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಶರಣ್ಯ ನಟಿಸಿರುವ ಸಿನಿಮಾಗಳು
‘ಸ್ಫೂಕಿ ಕಾಲೇಜ್’, ‘ರವಿ ಬೋಪಣ್ಣ’, ‘ಪೆಂಟಗಾನ್’ ಮತ್ತು ‘ನಗುವಿನ ಹೂಗಳ ಮೇಲೆ’ ಚಿತ್ರಗಳು ಬಿಡುಗಡೆ ಆಗಬೇಕಿವೆ.
ಇವರ ಚೊಚ್ಚಲ ಸಿನಿಮಾ ‘1980’ರಲ್ಲಿ ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗರಾಜ್ ಬೇತೂರ್ ನಿರ್ದೇಶನದ ‘ಹುಟ್ಟು ಹಬ್ಬದ ಶುಭಾಶಯಗಳು’ ಹಾಸ್ಯ-ನಾಟಕ ಚಿತ್ರದಲ್ಲೂ ನಟಿಸಿದ್ದಾರೆ.
ಕಿರುತೆರೆಯಲ್ಲಿಯೂ ಸಾಹಿತ್ಯ ಹೆಸರಿನ ಮೂಲಕವೇ ಹೆಸರು ಮಾಡಿರುವ ಶರಣ್ಯ ಅವರು ‘ಗಟ್ಟಿಮೇಳ’ದ ಮೂಲಕ ರಾಜ್ಯದ ಮನೆಯ ಮಾತಾಗಿದ್ದಾರೆ. ಇದರೊಂದಿಗೆ ಲಕ್ಷ್ಮೀ, ಆಕಾಶ ದೀಪ ಸೇರಿದಂತೆ ಹಲವು ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ.

https://suddikanaja.com/2021/09/20/south-indian-international-movie-awards-ceremony-held-at-hyderbad/

Leave a Reply

Your email address will not be published. Required fields are marked *

error: Content is protected !!