Kuvempu University | ಜಪಾನ್ ಅಧಿಕಾರಿಗಳೊಂದಿಗೆ ಕುವೆಂಪು ವಿವಿ‌ ಅಧಿಕಾರಿಗಳ ಪ್ರಮುಖ ಮೀಟಿಂಗ್, ಏನೆಲ್ಲ‌ ಚರ್ಚಿಸಲಾಯಿತು?

Kuvempu VV Japan

 

 

HIGHLIGHTS

  • ಕುವೆಂಪು ವಿಶ್ವವಿದ್ಯಾಲಯದಲ್ಲಿ ಜಪಾನ್ ನ ಅಧಿಕಾರಿಗಳು ಭೇಟಿ, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ
  • ಗುಣಮಟ್ಟದ ಶಿಕ್ಷಣ, ಸಂಶೋಧನಾ ಚಟುವಟಿಕೆಗಳು, ಗ್ರಾಮೀಣ ವಿದ್ಯಾರ್ಥಿಗಳ ಸೃಜನಶೀಲತೆಗಳ ಬಗ್ಗೆ ಮೆಚ್ಚುಗೆ

ಸುದ್ದಿ ಕಣಜ.ಕಾಂ | DISTRICT | 30 SEP 2022
ಶಿವಮೊಗ್ಗ (shivamogga): ಬೆಂಗಳೂರಿನಲ್ಲಿರುವ ಜಪಾನ್ ದೇಶದ ಕಾನ್ಸುಲೇಟ್‌ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಅವರು ಕುವೆಂಪು ವಿವಿಯ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ, ಶೈಕ್ಷಣಿಕ ಸಂಶೋಧನಾ ಒಪ್ಪಂದಗಳು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಿಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿರುವ ಜಪಾನ್ ದೇಶದ ಕಾನ್ಸುಲೇಟ್‌ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಮತ್ತು ಭಾರತ-ಜಪಾನ್ ದೇಶಗಳ ವಾಣಿಜ್ಯ ಮತ್ತು ಔದ್ಯೋಗಿಕ ಮಂಡಳಿಯ ವ್ಯವಸ್ಥಾಪಕಿ ಎ.ಎಸ್.ಸವಿತಾ ಅವರು ಗುರುವಾರ ಕುವೆಂಪು ವಿವಿಗೆ ಭೇಟಿ ನೀಡಿದ್ದು, ಜಪಾನ್‌ನ ಶಿಕ್ಷಣ ಸಂಸ್ಥೆಗಳು ಮತ್ತು ಕುವೆಂಪು ವಿವಿಯ ನಡುವಿನ ಶೈಕ್ಷಣಿಕ- ಸಂಶೋಧನಾ ಚಟುವಟಿಕೆಗಳ ವಿನಿಮಯದ ಸಾಧ್ಯತೆಗಳ ಕುರಿತು ಚರ್ಚಿಸಿದರು.

READ | ಚಾರ್ಲಿ 777 ನಡುವೆಯೇ ‘ಚಾಲಿ 999’ ಹವಾ! ಏನಿದು ಇಲ್ಲಿದೆ ಮಾಹಿತಿ

ಕಾನ್ಸುಲೇಟ್ ವತಿಯಿಂದ ಸಂಪೂರ್ಣ ಸಹಕಾರ
ವಿವಿಯಲ್ಲಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ನಿಕಾಯಗಳ ನಿರ್ದೇಶಕರು ಮತ್ತು ಉನ್ನತ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿದ ಅವರು ವಿವಿಯಲ್ಲಿನ ಗುಣಮಟ್ಟದ ಶಿಕ್ಷಣ, ಸಂಶೋಧನಾ ಚಟುವಟಿಕೆಗಳು, ಗ್ರಾಮೀಣ ವಿದ್ಯಾರ್ಥಿಗಳ ಸೃಜನಶೀಲತೆಗಳ ಕುರಿತು ಮಾಹಿತಿ ಪಡೆದು ಮೆಚ್ಚುಗೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ಜಪಾನ್‌ನ ವಿವಿಗಳು, ಶಿಕ್ಷಣ ಸಂಸ್ಥೆಗಳೊಂದಿಗೆ ಕುವೆಂಪು ವಿವಿಯು ಶೈಕ್ಷಣಿಕ ಮತ್ತು ಸಂಶೋಧನಾ ವಿಷಯಗಳಲ್ಲಿ ವಿದ್ಯಾರ್ಥಿ ವಿನಿಮಯ, ಒಪ್ಪಂದಗಳನ್ನು ಕೈಗೊಳ್ಳಲು ಮುಂದಾದಲ್ಲಿ ಕಾನ್ಸುಲೇಟ್ ವತಿಯಿಂದ ಸಂಪೂರ್ಣ ಸಹಕಾರ, ನೆರವು ನೀಡಲಾಗುವುದು ಎಂದು ಬೋಧಕರನ್ನು ಉತ್ತೇಜಿಸಿದರು.
ಫಿಜಿಟ್ಸು ಕನ್ಸಲ್ಟಿಂಗ್ ಇಂಡಿಯಾ ಸಂಸ್ಥೆಯ ಹಿರಿಯ ಮುಖ್ಯಸ್ಥ ಸವೀನ್ ಚಂದ್ರಶೇಖರ್, ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್. ಪ್ರೊ. ರಿಯಾಜ್ ಅಹಮದ್, ಕೆ. ಐಕ್ಯೂಎಸಿ ವಿಭಾಗದ ಪ್ರೊ. ವೈ.ಎಲ್. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಅಧ್ಯಾಪಕರು ಸಭೆಯಲ್ಲಿ ಹಾಜರಿದ್ದರು.

https://suddikanaja.com/2021/09/09/kuvempu-university-top-100-in-national-institutional-ranking-framework-ranking/

Leave a Reply

Your email address will not be published. Required fields are marked *

error: Content is protected !!