Dead Body | ಎಸ್.ಪಿ.ಎಂ ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆ

Dead body

 

 

ಸುದ್ದಿ ಕಣಜ.ಕಾಂ | SHIMOGA CITY | 21 OCT 2022
ಶಿವಮೊಗ್ಗ(Shivamogga): ಅಕ್ಟೋಬರ್ 15 ರಂದು ಬೆಳಗ್ಗೆ ನಗರದ ಎಸ್‍ಪಿಎಂ ರಸ್ತೆ ಬಳಿ ಸುಮಾರು 65 ರಿಂದ 70 ವರ್ಷದ ಅಪರಿಚಿತ ವ್ಯಕ್ತಿ ಮಲಗಿದ ಜಾಗದಲ್ಲಿಯೇ ಮೃತಪಟ್ಟಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

READ | ದೀಪಾವಳಿ ಹಬ್ಬದ ಆಫರ್, ಚರ್ಮದ ಉತ್ಪನ್ನಗಳ ಮೇಲೆ‌‌ ಶೇ.20 ರಿಯಾಯಿತಿ

ಗುರುತು ಪತ್ತೆಯಾದರೆ ತಕ್ಷಣ ಇವರನ್ನು ಸಂಪರ್ಕಿಸಿ
ಈ ಅಪರಿಚಿತ ವ್ಯಕ್ತಿ ಮೂರು ನಾಲ್ಕು ತಿಂಗಳಿನಿಂದ ರಾಮಣ್ಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಸುತ್ತಮುತ್ತ ಭಿಕ್ಷೆ ಬೇಡಿಕೊಂಡಿದ್ದರು. ಮೃತರು ಸುಮಾರು 5 ಅಡಿ 5 ಇಂಚು ಎತ್ತರ ಇದ್ದು, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ 1 ಇಂಚು ಉದ್ದದ ಕಪ್ಪು ಮತ್ತು ಬಿಳಿ ಕೂದಲು, ಎದೆಯ ಕೆಳಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ಶರ್ಟ್, ಕೆಂಪು ಬಣ್ಣದ ಹೂವಿನ ಡಿಸೈನ್ ಇರುವ ಬೆಡ್‍ಶೀಟ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

https://suddikanaja.com/2022/10/20/shimoga-mp-by-raghavendra-requsted-central-to-provide-kerosene-oil-to-coastal-area/

Leave a Reply

Your email address will not be published. Required fields are marked *

error: Content is protected !!