Quarrel | ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾವ- ಅಳಿಯನ ಜಗಳ, ಹೊಡೆದಾಟಕ್ಕೇನು ಕಾರಣ?

Soraba

 

 

HIGHLIGHTS

  • ಕಾಮಗಾರಿ ವಿಚಾರವಾಗಿ ಅತ್ತೆಯ ವಿರುದ್ಧವೇ ಆರೋಪಿಸಿದ್ದ ಅಳಿಯ ಉದಯಕುಮಾರ್
  • ಸೋಶಿಯಲ್ ಮೀಡಿಯಾದಲ್ಲಿ ಕಾಮಗಾರಿ ಕಳಪೆಯ ಬಗ್ಗೆ ಆಪಾದಿಸಿದ್ದಕ್ಕೆ ಮಾವ, ಅಳಿಯನ ನಡುವೆ ಹೊಡೆದಾಟ

ಸುದ್ದಿ ಕಣಜ.ಕಾಂ | TALUK | 24 OCT 2022
ಸೊರಬ(soraba): ತಾಲೂಕಿನ ಬಿಳವಾಣಿ (Bilavani) ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ವಿರುದ್ಧದ ಅವಿಶ್ವಾಸ ಸಂಬಂಧಿಸಿದಂತೆ ಅಳಿಯ ಮತ್ತು ಮಾವನ ನಡುವೆ ಜಗಳವಾಗಿದ್ದು, ಇಬ್ಬರೂ ಹೊಡೆದಾಡಿಕೊಂಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ (police station) ಮೆಟ್ಟಿಲೇರಿದೆ.

READ | ಮುಖಕ್ಕೆ ಖಾರದ ಪುಡಿ ಎರಚಿ ಅಟ್ಯಾಕ್

ಏನಿದು ಜಗಳ, ಹೊಡೆದಾಟಕ್ಕೇನು ಕಾರಣ?
ಕಳಪೆ ಕಾಮಗಾರಿಗೆ ಮುಂದಾಗಿದ್ದ ಸದಸ್ಯರನ್ನು ಅಡ್ಡಿಪಡಿಸಿದ್ದಕ್ಕೆ ತಮ್ಮ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಗಿದೆ ಎಂದು ಬಿಳವಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಗುರುವಪ್ಪ ಅವರು ಗಂಭೀರ ಆರೋಪ ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅತ್ತೆಯ ವಿರುದ್ಧವೇ ಆರೋಪ
ಅದಕ್ಕೆ ಕಿಡಿಕಾರಿದ ಸವಿತಾ ಅವರ ಅಳಿಯ ಉದಯಕುಮಾರ್, ‘ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ತನ್ನ ಮೇಲೆ ಆಪಾದಿಸಲಾಗುತ್ತಿದೆ. ಅವರೇ ಕಳಪೆ ಕಾಮಗಾರಿ ಮಾಡಿ ಬಿಲ್ ತೆಗೆಯಲು ಮುಂದಾಗಿದ್ದರು’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನು ವಿಚಾರಿಸುವುದಕ್ಕಾಗಿ ಮಾವ ಗುರುವಪ್ಪ ಅವರು ಅಳಿಯ ಉದಯಕುಮಾರ್ ಅವರ ಮನೆಗೆ ಶನಿವಾರ ರಾತ್ರಿ ಬಂದಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಹೊಡೆದಾಡಿಕೊಂಡಿದ್ದಾರೆ. ಸೊರಬ (soraba) ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ನೀಡಿದ್ದಾರೆ.

https://suddikanaja.com/2022/10/23/police-folied-a-case-against-41-person-at-shivamogga/

Leave a Reply

Your email address will not be published. Required fields are marked *

error: Content is protected !!