Hori habba | ಹೋರಿ ತಿವಿದು ಶಿಕಾರಿಪುರದಲ್ಲಿ ಮೂರನೇ ಬಲಿ, ಮೂರು ದಿನಗಳಲ್ಲಿ ಮೂರು ಸಾವು

Horihabba

 

 

HIGHLIGHTS

  • ಮೂವರ ಪ್ರಾಣಕ್ಕೆ‌ ಕಂಟಕವಾದ ಹೋರಿ ಬೆದರಿಸುವ ಸ್ಪರ್ಧೆ
  • ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ಸೇರಿ ಮೂವರ ಸಾವು

ಸುದ್ದಿ ಕಣಜ.ಕಾಂ | DISTRICT | 01 NOV 2022
ಶಿಕಾರಿಪುರ (shikaripura): ತಾಲೂಕಿನಲ್ಲಿ ನಡೆಯುತ್ತಿರುವ ಹೋರಿ ಹಬ್ಬ(Hori habba) ಮೂರು ದಿನಗಳಲ್ಲಿ‌ ಮೂವರ ಪ್ರಾಣ ನುಂಗಿದೆ. ಹೋರಿ ತಿವಿದು ಮೂರು ಜನ ಮೃತಪಟ್ಟಿದ್ದಾರೆ.
ತಾಲೂಕಿನ ಕಲ್ಮನೆ ನಿವಾಸಿ ವಸಂತ್(30) ಎಂಬುವವರು ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡುವ ವಸಂತ್ ಅವರು ತರಲಘಟ್ಟಕ್ಕೆ ಬಂದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಓಡಿ ಬರುತ್ತಿದ್ದ ಹೋರಿಯೊಂದು ತಿವಿದಿದೆ. ನೆಲಕ್ಕೆ‌ ಬಿದ್ದ ಆತನನ್ನು ತುಳಿದುಕೊಂಡೇ ಹೋಗಿದ್ದರಿಂದ ತೀವ್ರ ಗಾಯಗೊಂಡಿದ್ದ‌. ತಕ್ಷಣ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ರಾಯಲ್ ಆರ್ಕಿಡ್ ಸಮೀಪ ಯುವಕನ ಮೇಲೆ ಹಲ್ಲೆ 

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯಾರ‌್ಯಾರ ಸಾವು?
ಕಳೆದ ಎರಡು ದಿನಗಳಲ್ಲಿ ಮೂವರು ಹೋರಿ ತಿವಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಗಾಮದ ಪ್ರಶಾಂತಕುಮಾರ್‌ (36), ಸಮೀಪದ ಕಲ್ಮನೆ ಗ್ರಾಮದ ವಸಂತ್ (30) ಹಾಗೂ ಸೊರಬ ತಾಲೂಕಿನ ಜಡೆ ಗ್ರಾಮದ ಚಗಟೂರಿನ ಆದಿ ಮೃತರು.
Case no 1- ಮೊದಲನೇ ಪ್ರಕರಣ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಗುರುವಾರ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡುವುದಕ್ಕಾಗಿ ಪ್ರಶಾಂತ್ ಎಂಬಾತ ಗಾಮ ಗ್ರಾಮಕ್ಕೆ ಬಂದಿದ್ದ. ಆಗ ಹೋರಿ ದಿಢೀರ್ ಜನರತ್ತ ನುಗ್ಗಿದೆ. ಸ್ಪರ್ಧೆಯನ್ನು ಆಸ್ವಾದಿಸುತ್ತಿದ್ದ ಪ್ರಶಾಂತ್’ಗೆ ಹೋರಿ ಗುದ್ದಿದ್ದು, ನೆಲಕ್ಕೆ ಬಿದ್ದ ಆತನನ್ನು ಹೋರಿ ತುಳಿದುಕೊಂಡು ಹೋಗಿದೆ. ಗಾಯಾಳುವನ್ನು ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಆತನ ಶುಕ್ರವಾರ ರಾತ್ರಿ ಕೊನೆಯುಸಿರೆಳೆದ್ದಿದ್ದಾನೆ.
Case no.2- ಎರಡು ಘಟನೆ ಸಂಭವಿಸಿದ್ದು ಶುಕ್ರವಾರ. ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಹೋರಿಯು ಆದಿ ಎಂಬಾತನಿಗೆ ತಿವಿದಿದೆ. ಹೋರಿ ಹಬ್ಬ ಮುಗಿಸಿ ಎಲ್ಲರೂ ಮನೆಗೆ ಹೊರಟಾಗ ಹೋರಿ ಓಡುತ್ತಾ‌ ಬಂದು ಮನೆಗೆ ನಡೆದಿದ್ದ ಆದಿಗೆ ಚುಚ್ಚಿದೆ. ಈ ಹೋರಿ ಚಗಟೂರಿನದ್ದಾಗಿದ್ದು, ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Case no.3- ಮೂರನೇ ಘಟನೆ ಶಿಕಾರಿಪುರದಲ್ಲಿ‌ ಭಾನುವಾರ ನಡೆದಿದೆ. ಈ ಘಟನೆಯಲ್ಲಿ ಕಲ್ಮನೆಯ ವಸಂತ್ ಸಾವನ್ನಪ್ಪಿದ್ದಾನೆ. ತರಲಘಟ್ಟದಲ್ಲಿ ಹೋರಿ ತಿವಿತಕ್ಕೆ‌ ಒಳಪಟ್ಟಾತ ಮೃತಪಟ್ಟಿದ್ದಾನೆ.

https://suddikanaja.com/2022/10/31/black-magic-at-gopal-shivamogga/

Leave a Reply

Your email address will not be published. Required fields are marked *

error: Content is protected !!