Jobs in KFD | ಬಿಎಸ್ಸಿ, ಎಂಜಿನಿಯರಿಂಗ್ ಪದವಿಧರರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ

RFO

 

 

ಸುದ್ದಿ ಕಣಜ.ಕಾಂ | JOB JUNCTION
ಶಿವಮೊಗ್ಗ: ಕರ್ನಾಟಕ ಅರಣ್ಯ ಇಲಾಖೆ(Karnataka Forest Department)ಯು 10 ವಲಯ ಅರಣ್ಯ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ  (Notification) ಹೊರಡಿಸಲಾಗಿದೆ.
ಅಕ್ಟೋಬರ್ 15ರಂದು ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 19ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಿಎಸ್ಸಿಯಲ್ಲಿ ಸಂಬಂಧಪಟ್ಟ ಕೋರ್ಸ್ ಅಥವಾ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದು.

JOBS FB Link

READ | ಶಿವಮೊಗ್ಗದ 22 ಕೇಂದ್ರಗಳಲ್ಲಿ ನಡೆಯಲಿದೆ ಟಿಇಟಿ ಪರೀಕ್ಷೆ, ಬೆಳಗ್ಗೆಯಿಂದ ಸಂಜೆಯವರೆಗೆ ನಿಷೇಧಾಜ್ಞೆ

  • ನೇಮಕಾತಿ ಸಂಸ್ಥೆ- ಕರ್ನಾಟಕ ಅರಣ್ಯ ಇಲಾಖೆ
  • ಹುದ್ದೆಯ ಹೆಸರು- ವಲಯ ಅರಣ್ಯಾಧಿಕಾರಿ
  • ಹುದ್ದೆಗಳ ಸಂಖ್ಯೆ- 10
  •  ಅರ್ಜಿ ಸಲ್ಲಿಕೆ ವಿಧಾನ- ಆನ್‍ಲೈನ್
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 20/10/2022
  • ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ- 19/11/2022
  • ಹಾರ್ಡ್ ಕಾಪಿಗಳನ್ನು ಸಲ್ಲಿಸಲು ಕೊನೆ ದಿನ- 23/11/2022

ವಯೋಮಿತಿ
ಕನಿಷ್ಠ ವಯೋಮಿತಿ- 18 ವರ್ಷ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ
ಎ2, 2ಬಿ, 3ಎ, 3ಬಿ- ಗರಿಷ್ಠ 31 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ 1- 33 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ, 2ಎ, 2ಬಿ, 3ಎ, 3ಬಿ- 200 ರೂ. ಹಾಗೂ 20 ಸೇವಾ ಶುಲ್ಕ
ಎಸ್ಸಿ, ಎಸ್ಟಿ, ಪ್ರವರ್ಗ 1- 100 ರೂ., ಹಾಗೂ 20 ರೂ. ಸೇವಾ ಶುಲ್ಕ

READ | ರೈಲ್ವೆ ಸೇರಿ ವಿವಿಧ ಇಲಾಖೆಯಲ್ಲಿ ಬೃಹತ್ ಉದ್ಯೋಗ ಮೇಳ, ಯಾವ್ಯಾವ ದರ್ಜೆಗಳ ನೇಮಕಾತಿ?

ಅಭ್ಯರ್ಥಿಗಳೇ ಗಮನಿಸಿ
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿಯ ಪ್ರತಿಯನ್ನು ಮುದದ್ರಿಸಿ ಮಾಹಿತಿಗಾಗಿ ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಒಮ್ಮೆ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ಪರಿಗಣಿಸುವುದಿಲ್ಲ. ಆನ್‍ಲೈನ್ ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.
ಹುದ್ದೆಗಳ ವಿವರ
ಬಿಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ 5 ಹುದ್ದೆಗಳು ಹಾಗೂ ಬಿಎಸ್ಸಿ (ವಿಜ್ಞಾನ)/ ನಿಗದಿತ ಎಂಜಿನಿಯರಿಂಗ್ ಪದವಿಧರರಿಗೆ 5 ಹುದ್ದೆಗಳು

ಆನ್‍ಲೈನ್ ಅರ್ಜಿ  ಕ್ಲಿಕ್
ಅಧಿಸೂಚನೆ ಕ್ಲಿಕ್
ಅಧಿಕೃತ ವೆಬ್‍ಸೈಟ್ ಕ್ಲಿಕ್
ಉದ್ಯೋಗ ಸುದ್ದಿಗಳಿಗಾಗಿ ಕ್ಲಿಕ್

error: Content is protected !!