Court news | ಆಟೋ ಚಾಲಕನಿಗೆ ₹15 ಸಾವಿರ ದಂಡ, ಕಟ್ಟಲು ನಿರಾಕರಿಸಿದ್ದಕ್ಕೆ 10 ದಿನ ಜೈಲು ಶಿಕ್ಷೆ

Judgement

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಟೋ ಚಾಲಕನೊಬ್ಬ‌ನಿಗೆ ಶಿವಮೊಗ್ಗ ನ್ಯಾಯಾಲಯವು ₹15 ಸಾವಿರ ದಂಡ ವಿಧಿಸಿದ್ದು, ಕಟ್ಟಲು ನಿರಾಕರಿಸಿದ್ದಕ್ಕೆ 19 ದಿನಗಳ ಸಾದಾ ಶಿಕ್ಷೆ ವಿಧಿಸಿ ನ್ಯಾಯಲಯ ಆದೇಶಿಸಿದೆ.

READ | ಮನೆ ಬಾಡಿಗೆ ನೀಡುವ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ

ಜೆ.ಪಿ.ನಗರ ನಿವಾಸಿ ಆಟೋ ಚಾಲಕ ಮೊಹಮ್ಮದ್ ಹುಸೇನ್(35) ಶಿಕ್ಷೆ ವಿಧಿಸಲಾಗಿದೆ. ಈತ ಬಿ.ಎಚ್. ರಸ್ತೆಯ ಲಕ್ಷ್ಮೀ ಮೆಡಿಕಲ್ ಹತ್ತಿರ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ವಾಹನಗಳನ್ನು ತಪಾಸಣೆ ಮಾಡಿದ್ದಾಗ ಕುಡಿದು ಆಟೋ ಚಲಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಆಟೋದೊಂದಿಗೆ ಚಾಲಕನನ್ನು ಠಾಣೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.
ತಪಾಸಣೆ ವೇಳೆ ಡಿಎಲ್ ಇಲ್ಲದ್ದೂ ಪತ್ತೆಯಾಯ್ತು
ಆಟೋ ಚಾಲಕನು ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆಟೋ ಮತ್ತು ಆತನನ್ನು ಠಾಣೆಗೆ ಕರೆತಂದು ತಪಾಸಣೆಗೊಳಪಡಿಸಿದಾಗ ಆ ವ್ಯಕ್ತಿಯು ಮದ್ಯಪಾನ ಮಾಡಿ ಮತ್ತು ಚಾಲನಾ ಪರವಾನಗಿ ಇಲ್ಲದೆಯೇ ವಾಹನ ಚಲಾವಣೆ ಮಾಡುತ್ತಿದ್ದುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೊಹಮ್ಮದ್ ಹುಸೇನ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಅನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.

error: Content is protected !!