Police Raid | ಪೊಲೀಸರ ದಿಢೀರ್ ಕಾರ್ಯಾಚರಣೆ, 10 ಜನರ ವಶ

Kote police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ಪೊಲೀಸರು ಬುಧವಾರ ದಿಢೀರ್ ಕಾರ್ಯಾಚರಣೆ ನಡೆಸಿ, ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ.
ಕೆಲವು ಜನರು ಸೇರಿಕೊಂಡು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕೋಟೆ ಪೊಲೀಸ್ ಠಾಣೆ ಪಿಐ ಟಿ.ಕೆ.ಚಂದ್ರಶೇಖರ್ ಮತ್ತು ಸಿಬ್ಬಂದಿ ತಂಡವು ದಾಳಿ ನಡೆಸಿದೆ.
₹79,650 ನಗದು ಸೀಜ್
ಇಸ್ಪಿಟು ಜೂಜಾಟ ಆಡುತ್ತಿದ್ದ 10 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ ₹79,650 ನಗದು ಮತ್ತು ಇಸ್ಪೀಟು ಕಾರ್ಡ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/11/30/mp-by-raghavendra-furious-reaction-on-congress-allegations-and-asked-questions/

error: Content is protected !!